ಬಂಟ್ವಾಳ, ಆ.29: ಮುಹಿಯುದ್ದೀನ್ ಕೇಂದ್ರ ಜುಮಾ ಮಸೀದಿ ಫರಂಗಿಪೇಟೆ ಇದರ ವಾರ್ಷಿಕ ಮಹಾ ಸಭೆ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ 2021-22ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಎಫ್.ಉಮರ್ ಫಾರೂಕ್ ಫರಂಗಿಪೇಟೆ, ಉಪಾಧ್ಯಕ್ಷರಾಗಿ ಟಿ.ಕೆ.ಬಶೀರ್, ಪ್ರಧಾನ ಕಾರ್ಯದರ್ಶಿಯಾಗಿ ಯೂಸುಫ್ ಅಲಂಕಾರ್, ಜೊತೆ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಫರಂಗಿಪೇಟೆ, ಖಜಾಂಚಿಯಾಗಿ ಎಫ್.ಮಜೀದ್, ಲೆಕ್ಕ ಪರಿಶೋಧಕರಾಗಿ ಸಿರಾಜ್ ಕೋಡಿಮಜಲು ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ 12 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಮಸೀದಿಯ ಪ್ರಕಟನೆ ತಿಳಿಸಿದೆ.