ಬಂಟ್ವಾಳ: ತಾಲೂಕಿನ ಮೂರು ಪ್ರಸಿದ್ದ ದೇವಾಲಯ ಗಳಾದ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನ , ಶ್ರೀ ರಕ್ತೇಶ್ವರಿ ದೇವಾಸ್ಥಾನ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ದಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗನ ಕಟ್ಟೆ ಗೆ ಸಾಂಪ್ರದಾಯಿಕ ರೀತಿಯಲ್ಲಿ ಹಾಲು ಮತ್ತು ಶೀಯಾಭಿಷೇಕ ನಡೆಯಿತು.
ಕೋವಿಡ್ ಸಂಬಂಧಿಸಿದ ಸರಕಾರದ ನಿಯಮ ಗಳ ಪಾಲನೆ ಮಾಡಿದ ದೇವಾಲಯಗಳು ಸಾಂಪ್ರದಾಯಿಕ ರೀತಿಯಲ್ಲಿ ನಾಗರಪಂಚಮಿ ಆಚರಣೆ ನಡೆಸಿದರು.
ಭಕ್ತರು ಹಾಲು ಹಾಗೂ ನಾಗನಿಗೆ ಪ್ರಿಯವಾದ ಇತರ ಪೂಜಾ ಸಾಮಗ್ರಿಗಳನ್ನು ದೇವಾಲಯಕ್ಕೆ ನೀಡಿದ್ದರಾದರೂ ಪೂಜೆ ನಡೆಯುವ ಸಂದರ್ಭದಲ್ಲಿ ಭಕ್ತರು ಗುಂಪಾಗಿ ಸೇರಲು ಅವಕಾಶ ನೀಡದೆ ಆರ್ಚಕರೆ ಪೂಜೆ ನೆರವೇರಿಸಿದರು.