ಬಂಟ್ವಾಳ: ನಿರತ ಸಾಹಿತ್ಯ ಸಂಪದ ಮತ್ತು ಗಲ್ಫ್ ಕನ್ನಡಿಗ – ಇವರ ಜಂಟಿ ಆಶ್ರಯದಲ್ಲಿ ಮೊದಲ ಬಾರಿಗೆ ನೀಡುವ ಅತ್ಯುತ್ತಮ ವೆಬ್‍ಸೈಟ್ (ಅಂತರ್ಜಾಲ) ವರದಿಗೆ
ರಾಜ್ಯ ಮಟ್ಟದ ಬಿ. ಜಿ. ಮೋಹನ್‍ದಾಸ್ ಪ್ರಶಸ್ತಿ – 2021ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಶಸ್ತಿಯು ರೂ. 5000 ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಗೆ ಕನ್ನಡ ವೆಬ್‍ಸೈಟ್‍ನಲ್ಲಿ ಪ್ರಕಟಗೊಂಡ ವರದಿಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು. 2020 ಜುಲಾಯಿ 1ರಿಂದ ಜೂನ್ 30 2021ರ ವರೆಗೆ ಪ್ರಕಟವಾದ ಮಾನವೀಯ ಮೌಲ್ಯ, ಗ್ರಾಮೀಣ ಸಮಸ್ಯೆ, ತನಿಖಾ ಆಧಾರಿತ ವರದಿ, ಎಕ್ಸ್ ಕ್ಲೂಸಿವ್ ಸೇರಿದಂತೆ ಅತ್ಯುತ್ತಮ ವರದಿಗಳಲ್ಲಿ ಓರ್ವರನ್ನು ಆಯ್ಕೆ ಮಾಡಲಾಗುವುದು. ಒಬ್ಬ ಪತ್ರಕರ್ತರಿಗೆ ಒಂದು ವರದಿ ಕಳುಹಿಸಲು ಮಾತ್ರ ಅವಕಾಶವಿದೆ.ವರದಿಯು ಬೇರೆ ಯಾವುದೇ ಪತ್ರಿಕೆ ಅಥವಾ ಸುದ್ದಿ ಜಾಲದಲ್ಲಿ ಪ್ರಕಟವಾಗಿರಬಾರದು.ಆಯ್ಕೆಗೆ ವರದಿಯ ಮುದ್ರಿತ 3 ಪ್ರತಿಗಳನ್ನು ಕೆಳಗೆ ನೀಡಿರುವ ವಿಳಾಸಕ್ಕೆ ಜುಲಾಯಿ 31ರೊಳಗೆ ಕಳುಹಿಸಿಕೊಡಬೇಕು.ಮುದ್ರಿತ ವರದಿಯ ವೆಬ್‍ಸೈಟ್ ಲಿಂಕ್ (URL Address) ನ್ನು ಕಡ್ಡಾಯವಾಗಿ 9844619763 ಈ ನಂಬರಿಗೆ ವಾಟ್ಸಪ್ ಮಾಡಬೇಕು. ನಿರ್ಣಾಯಕರ ತೀರ್ಮಾನವೇ ಅಂತಿಮ. ಯಾವುದೇ ಚರ್ಚೆಗೆ ಆಸ್ಪದವಿಲ್ಲ.ವರದಿಯನ್ನು ಕಳುಹಿಸಬೇಕಾದ ವಿಳಾಸ :ದಿನೇಶ್ ಎನ್. ತುಂಬೆ,ಕಾರ್ಯದರ್ಶಿ, ನಿರತ ಸಾಹಿತ್ಯ ಸಂಪದ,ಪ್ರಗತಿ ಪ್ರಿಂಟರ್ಸ್, ತುಂಬೆ – 574 143
ಬಂಟ್ವಾಳ ತಾಲೂಕು, ದ. ಕ.