ಬಂಟ್ವಾಳ: ಬಂಟ್ವಾಳ ತಾಲೂಕು ನಾವೂರು ಗ್ರಾಮದ ಬಡಗುಂಡಿ ಮನೆಯೊಂದರಲ್ಲಿ ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟು ಉಲಾಯಿ ಪಿದಾಯಿ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧಾರ ದಲ್ಲಿ ದಾಳಿ ನಡೆಸಿದ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್ ಅವರು ಆಟದಲ್ಲಿ ನಿರತರಾಗಿದ್ದ 12 ಮಂದಿಯನ್ನು ಬಂಧಿಸಿ ಆಟಕ್ಕೆ ಬಳಸಿದ ಸೊತ್ತುಗಳ ಸಹಿತ ಸಾವಿರಾರು ರೂ ನಗದು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಆಟದಲ್ಲಿ ನಿರತರಾಗಿದ್ದ
1] ಕೃಷ್ಣ ಪೂಜಾರಿ 2] ರೋಹಿತಾಶ್ವ 3] ಗೋಪಾಲ 4] ಸತೀಶ ಮೂಲ್ಯ 5] ವಿಜಯ ಫೆರ್ನಾಂಡಿಸ್ 6] ವಿಶ್ವಾಸ್ ಭಂಡಾರಿ 7] ಗಂಗಾಧರ ಪೂಜಾರಿ 8] ಕೃಷ್ಣಪ್ಪ 9] ಶಿವಪ್ರಸಾದ್ 10] ಮೊಹಮ್ಮದ್ ಶರೀಫ್ 11] ಮೊಹಮ್ಮದ್ ಅಶ್ರಫ್ 12] ರಿಯಾಝ್
ಅವರನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ.
ಬಂದಿತರಿಂದ 45,000/-, ನಗದು ಹಾಗೂ 12 ಮೊಬೈಲ್ ಫೋನ್ ಗಳು ಅಂದಾಜು 40,000/, 4 ಬೈಕ್ ಗಳು ಅಂದಾಜು ಮೌಲ್ಯ 1,20,000/-, 1 ಓಮ್ನಿ ವಾಹನ ಅಂದಾಜು ಮೌಲ್ಯ 50,000/-, 1 ಆಟೋರಿಕ್ಷಾ ಅಂದಾಜು ಮೌಲ್ಯ 40,000/- ವಶಕ್ಕೆ ಪಡೆದಿದ್ದಾರೆ.
ನಾವೂರ ಗ್ರಾಮದ ಬಡಗುಂಡಿ ಎಂಬಲ್ಲಿ ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟು ಉಲಾಯಿ ಪಿದಾಯಿ ಆಡುತ್ತಿದ್ದ ಸ್ಥಳಕ್ಕೆ ಜಿಲ್ಲಾ ಪೋಲೀಸ್ ಮಾಹಿತಿ ಯಂತೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದಾಗ ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟು ಉಲಾಯಿ ಪಿದಾಯಿ ಆಡುತ್ತಿದ್ದು ಕಂಡು ಬಂದಿದ್ದು ಸ್ಥಳದಲ್ಲಿದ್ದ 12 ಜನರನ್ನು ವಶಕ್ಕೆ ಪಡೆದಿದ್ದು ಅವರುಗಳು ರವರಾಗಿದ್ದು ಉಲಾಯಿ ಪಿದಾಯಿ ಆಡುವುದಕ್ಕೆ ಬಳಸಿದ ನಗದು ಹಾಗೂ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡು ಗ್ರಾಮಾಂತರ ಠಾಣಾ ಅ.ಕ್ರ 83/2021 ಕಲಂ 78, 80 ಕರ್ನಾಟಕ ಪೊಲೀಸ್ ಕಾಯ್ದೆ 1963 ರಂತೆ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿರುತ್ತದೆ.