ಡಾ|| ಬಿ. ಅಹಮ್ಮದ್ ಹಾಜಿ ಮುಹಿಯುದ್ದೀನ್ ಅವರು ತಮ್ಮ ಜೀವನವಿಡೀ ಶಿಸ್ತು, ಸಂಯಮವೇ ಮುಂತಾದ ಆದರ್ಶಗಳಿಂದ ಸಮಾಜದ ಎಲ್ಲಾ ಸ್ತರದ ಜನರಿಗೆ ಬೇಕಾದವರಾಗಿದ್ದರು. ಅವರ ಆದರ್ಶದ ಗುಣಗಳನ್ನು ಇರಿಸಿಕೊಂಡು ನಾವೆಲ್ಲಾ ಮುನ್ನಡೆಯಬೇಕಾಗಿದೆ ಎಂಬುದಾಗಿ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಬಿ.ಎ.ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ನಿರ್ದೇಶಕರಾದ ಅಬ್ದುಲ್ ಸಲಾಂ ಅವರು ಹೇಳಿದರು.
ಅವರು ಪುದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ೧೫ ವರ್ಷಗಳಿಂದ ಜೂನಿಯರ್ ಲ್ಯಾಬ್ ಟೆಕ್ನಿಕಲ್ ಆಫೀಸ್‌ರ್ ಆಗಿ ಸೇವೆ
ಸಲ್ಲಿಸುತ್ತಿರುವ ಮತ್ತು ಪ್ರಸಕ್ತ ಕೋವಿಡ್ ವಾರಿಯರ್ ಆಗಿ ಶ್ರಮಿಸಿ ಜನ ಮೆಚ್ಚುಗೆ ಗಳಿಸಿದ ಮುಸ್ತಫಾ ಅವರನ್ನು ಕೋವಿಡ್ ವೀರ ಎಂದು
ಪ್ರಶಂಸಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್‌ನ ಟ್ರಸ್ಟೀ ಭೀಫಾತಿಮ ಅಹ್ಮದ್ ಹಾಜಿ ಅವರನ್ನು ತುಂಬೆ ವಿದ್ಯಾ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು. ಇತ್ತೀಚೆಗೆ ವೇತನಾ ಅನುದಾನಕ್ಕೆ ಒಳಪಟ್ಟ ಬೇಬಿ ಹಾಗೂ ಸಾಯಿರಾಂ ಜೆ ನಾಯಕ್ ಅವರನ್ನು ಅಬ್ದುಲ್ ಸಲಾಂ ಅವರು ಗೌರವಿಸಿದರು.
ಟ್ರಸ್ಟೀಗಳಾದ ಬಿ.ಎಂ ಅಶ್ರಫ್, ಪಿ.ಟಿ.ಎ. ಅಧ್ಯಕ್ಷ ಬಶೀರ್ ತಂಡೇಲ್, ಉಪಾಧ್ಯಕ್ಷ ನಿಸಾರ್ ಅಹಮ್ಮದ್, ತುಂಬೆ ಐಟಿಐಯ ಪ್ರಾಂಶುಪಾಲ ನವೀನ್ ಕುಮಾರ್, ಬ್ಯಾಂಕ್ ಆಫ್ ಬರೋಡಾ ಬ್ರಾಂಚ್‌ನ ಮ್ಯಾನೆಜರ್ ಸಂದೀಪ್ ಉಪಸ್ಥಿತರಿದ್ದ ಸಮಾವೇಶದಲ್ಲಿ ತುಂಬೆ ಕಾಲೇಜಿನ ಪ್ರಾಂಶುಪಾಲರಾದ ಕೆ.ಎನ್.ಗಂಗಾದರ ಆಳ್ವ ಪ್ರಸ್ತಾವಿಸಿ ಗೌರವಿಸಿದರು. ಯೋಗೀಶ್ ಬೊಳ್ಳಾರಿ ಆನ್‌ಲೈನ್ ತರಗತಿ ನಡೆಸುವ ಕುರಿತು ಪ್ರಾತ್ಯಕ್ಷತೆ ನೀಡಿದರು. ತುಂಬೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ಕೆ ವಂದಿಸಿ, ಕಛೇರಿ ಅದೀಕ್ಷಕರಾದ ಅಬ್ದುಲ್ ಕಬೀರ್ ಕಾರ್ಯಕ್ರಮ ನಿರೂಪಿಸಿದರು.