ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಇವರ ವಿಶೇಷ ಆರೋಗ್ಯ ಕಾಳಜಿಯ ಯೋಜನೆಯಾದ ಆರೋಗ್ಯವೇ ಭಾಗ್ಯ ಎಂಬ ದೃಷ್ಟಿಯಿಂದ ಆರಂಭವಾದ ಸಂಚಾರಿ ಬಸ್ ಇಂದು ಇರ್ವತ್ತೂರು ಗ್ರಾಮಕ್ಕೆ ಆಗಮಿಸಿದೆ.
ಬಂಟ್ವಾಳ ತಾಲೂಕಿನ ಜನತೆಗೆ ಉತ್ಕೃಷ್ಟವಾದ ಉಚಿತ ಆರೋಗ್ಯ ಸೇವೆ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಗ್ರಾಮದ ಆರೋಗ್ಯದ ಸುರಕ್ಷತೆಯ ಜಾಗೃತಿಯ ಸಲುವಾಗಿ ಇರ್ವತ್ತೂರು ಪಂಚಾಯತ್ ವಠಾರಕ್ಕೆ ಸಂಚಾರಿ ಆರೋಗ್ಯ ಬಸ್ ಆಗಮಿಸಿತು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಂಡರು.
ಈ ಸಂಧರ್ಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಎಂ ಪಿ.ಶೇಖರ್ ಉಪಾಧ್ಯಕ್ಷರಾದ ಹರೀಣಾಕ್ಚಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್,ಕಾರ್ಯದರ್ಶಿ ನಾರಯಣ ನಾಯ್ಕ್ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ರಮೇಶ್ ಕುಡಮೇರು,ಪುರುಷೋತ್ತಮ ಶೆಟ್ಟಿ ವಾಮದಪದವು ಗ್ರಾ.ಪಂ ಸದಸ್ಯರಾದ ದಯಾನಂದ ಎರ್ಮೆನಾಡು, ಶುಭಕರ ಶೆಟ್ಟಿ ಮಠ,ಸುಧೀಂದ್ರ ಶೆಟ್ಟಿ ಎರ್ಮೆನಾಡು, ಮಾಲತಿ,ವಿಜಯ, ಮಾಜಿ ಗ್ರಾ.ಪಂ ಉಪಾಧ್ಯಕ್ಷರಾದ ಶಂಕರ್ ಶೆಟ್ಟಿ ಬೆದ್ರಮಾರ್ ಮಾಜಿ ಗ್ರಾ.ಪಂ ಸದಸ್ಯರಾದ ಸುನಂದ,ಪಿಲತ್ತಬೆಟ್ಟು ಸಹಕಾರಿ ಸಂಘದ ನಿರ್ದೇಶಕ ಬೂಬ ಸಪಲ್ಯ ಮುಂಡಬೈಲು, ಸುಂದರ್ ನಾಯ್ಕ ಜಾರಿಗೆದಡಿ,ದಿನೇಶ್ ಮೂಲ್ಯ ಬಂಗೇರೆಕೆರೆ, ಮೂಡುಪಡುಕೋಡಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಪೂಜಾರಿ ಸೇವಾ, ಪ್ರಮುರಾದ ರವಿಶಂಕರ್ ಹೊಳ್ಳ ಮಣ್ಣೂರು,ಮಿಥುನ್ ಪ್ರಭು ಮಲ್ಯಾರು, ಸತೀಶ್ ಸಪಲ್ಯ ಮುಂಡಬೈಲು,ಸಂಚಾರಿ ಆರೋಗ್ಯ ಬಸ್ ನ ಸಿಬ್ಬಂದಿಗಳು ಹಾಗೂ ಗ್ರಾಮ ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.