ಬಂಟ್ವಾಳ : ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಹಡೀಲು ಭೂಮಿಯಲ್ಲಿ ಬೇಸಾಯ ಇದರಿಂದ ಪ್ರೇರಣೆಗೊಂಡ ಪಂಜಿಕಲ್ಲು ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮೀನಾರಾಯಣ ಗೌಡ ಅವರ ನೇತೃತ್ವದಲ್ಲಿ ಸೊರ್ನಾಡ್ ಬಲ್ ಪ್ರದೇಶದಲ್ಲಿ ಸುಮಾರು ಏಳು ಎಕರೆ ಹಡೀಲು ಭತ್ತದ ಗದ್ದೆಯಲ್ಲಿ ಬೇಸಾಯ ಮಾಡಿದ್ದು, ನೇಜಿ ನಾಟಿ ಮಾಡುವ ಕಾರ್ಯಕ್ರಮ ನಡೆಯಿತು.
ಲಕ್ಷ್ಮೀನಾರಾಯಣ ಗೌಡ ಅವರು, ಯಾವ ವಿದ್ಯೆಯಿಂದಲೂ ಹಸಿವನ್ನು ನೀಗಿಸಲು ಸಾಧ್ಯವಿಲ್ಲ ಅದು ಬೇಸಾಯದಿಂದ ಮಾತ್ರ ಸಾಧ್ಯ ಎಂದು ಮನಗಂಡು ಸೊರ್ನಾಡ್ ಪ್ರದೇಶದ ಕೃಷಿಕ ಮಿತ್ರರಾದ ವಿಶ್ವನಾಥ ಎಂ.ಕೆ ., ಸತೀಶ್ ಪೂಜಾರಿ ಹಾಗೂ ಪ್ರಕಾಶ್ ಭಂಡಾರಿ ಅವರ ಜೊತೆ ಸೇರಿಕೊಂಡು ಹಡೀಲು ಗದ್ದೆಯಲ್ಲಿ ಭತ್ತದ ಬೇಸಾಯ ಮಾಡಿದರು.
ಸ್ಥಳೀಯ ಕೃಷಿಕ ಮಹಿಳೆಯರು ನಾಟಿ ಕೆಲಸದಲ್ಲಿ ಪಾಲ್ಗೊಂಡು ಸಹಕಾರ ನೀಡಿದರು.