ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕಿನ ಪಾನೇಮಂಗಳೂರು ವಲಯದ ಸಜೀಪ ಮುನ್ನೂರು ಶಾರದಾಂಬಿಕಾ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಮತ್ತು ಅಟಿಡೊಂಜಿ ದಿನ ಕಾರ್ಯಕ್ರಮ ವನ್ನು ಆಚ ರಿಸಲಾಯಿತು. ಕಾರ್ಯಕ್ರಮ ವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ಯವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ವನ್ನು ಉದ್ಘಾಟಿಸಿ, ಜ್ಞಾನವಿಕಾಸ ಕಾರ್ಯಕ್ರಮ ದ ಮಹತ್ವ ದ ಬಗ್ಗೆ, ಸಂಸ್ಕೃತಿ ಮತ್ತು ಸಂಸ್ಕಾರ, ಮತ್ತು ಪ್ರಸ್ತುತ ದಿನಗಳಲ್ಲಿ ನಮ್ಮ ಜೀವನ ಕ್ರಮದ ಬಗ್ಗೆ ಉತ್ತಮವಾದ ಮಾಹಿತಿಯನ್ನು ನೀಡಿದರು.
ಸಜಿಪ ಮೂಡ ಸರಕಾರಿ ಆಸ್ಪತ್ರೆ ಯ ಆರೋಗ್ಯಕಾರ್ಯಕರ್ತೆ ಮೋಹಿನಿ ಯವರು ಪೌಷ್ಟಿಕ ಆಹಾರ ದ ಕ್ರಮದ ಬಗ್ಗೆ ಉತ್ತಮವಾದ ಮಾಹಿತಿಯನ್ನು ತಿಳಿಸಿದರು. ಕಾರ್ಯಕ್ರಮ ದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಜನ ಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ A C ಬಂಡಾರಿ ಯವರು ಮಹಿಳೆಯರನ್ನು ಸಬಲೆಯಾರನ್ನಾಗಿ ಮಾಡುವಲ್ಲಿ ಗ್ರಾಮಭಿವೃದ್ಧಿ ಯೋಜನೆಯ ಪಾಲು ತುಂಬಾ ದೊಡ್ಡದು, ಆಟಿ ತಿಂಗಳಲ್ಲಿ ಹಿಂದೆ ಇದ್ದ ಕಷ್ಟ ಹೋಗಲು ಮೂಲ ಕಾರಣವೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಎಂದು ತಿಳಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮ ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಜಯಾನಂದ ಪಿ ಉಪಸ್ಥಿತರಿದ್ದರು.ಕೇಂದ್ರದ ಸದಸ್ಯರು ಸುಮಾರು 36 ಬಗೆಯ ವಿಧ ವಿಧವಾದ ಆಟಿ ತಿಂಗಳಲ್ಲಿ ಮಾಡುವ ತಿಂಡಿ ತಿನಿಸುಗಳ್ನನು ಮನೆಯಲ್ಲಿ ಮಾಡಿ ತಂದು ಕಾರ್ಯಕ್ರಮದಲ್ಲಿ ಪ್ರದ್ರಶಿಸಿದರು. ಕಾರ್ಯಕ್ರಮದಲ್ಲಿ ಸೇವಾಪ್ರತಿನಿದಿ ಬೇಬಿ ಯವರು ಸ್ವಾಗತಿಸಿ, ಪಾನೇಮಂಗಳೂರು ವಲಯ ದ ಮೇಲ್ವಿಚಾರಕಿ ಅಮಿತಾ ರವರ ನಿರೂಪಣೆ ಯೊಂದಿಗೆ,ಬಂಟ್ವಾಳ ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸಪ್ನಾ ರವರು ಧನ್ಯವಾದವಿತ್ತರು.