ಬಂಟ್ವಾಳ : ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಆಪ್ತಸಹಾಯಕರಾಗಿ ಗೋಳ್ತಮಜಲು ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಿವಾನಂದ ಅವರನ್ನು ನೇಮಕಗೊಳಿಸಲಾಗಿದೆ.
ಶಾಸಕರ ಆಪ್ತ ಕಾರ್ಯದರ್ಶಿ ಯಾಗಿ ಕಾರ್ಯನಿರ್ವಹಿಸುತ್ತಿದ್ದ ಪಂಚಾಯತ್ ಅಭಿವೃದ್ದಿ ಅಧಿಕಾರಿ ದಿನೇಶ್ ಅವರನ್ನು ಬಂಟ್ವಾಳ ಪಂಚಾಯತ್
ಸಹಾಯಕ ನಿರ್ದೇಶಕ ಹುದ್ದೆಗೆ ನಿಯುಕ್ತಿಗೊಳಿಸಿ ಸರಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಗೋಳ್ತಮಜಲು ಗ್ತಾಮ ಪಂಚಾಯತ್ ಪಿ.ಡಿ.ಒ.ಅವರನ್ನು ಶಾಸಕರ ಆಪ್ತಕಾರ್ಯದರ್ಶಿಯಾಗಿ ತಕ್ಷಣ ದಿಂದ ಜಾರಿಗೆ ಬರುವಂತೆ ಸರಕಾರ ಆದೇಶ ಹೊರಡಿಸಿದೆ.
ದಿನೇಶ್ ಅವರು ಪಿ.ಡಿ.ಒ.ಹುದ್ದೆಯಿಂದ ಸಹಾಯಕ ನಿರ್ದೇಶಕರಾಗಿ ಪದೋನ್ನತಿ ಹೊಂದಿದ ಹಿನ್ನೆಲೆಯಲ್ಲಿ ಶಾಸಕ ರ ಆಪ್ತ ಸಹಾಯಕ ಹುದ್ದೆಗೆ ಪಿಡಿ.ಒ.ಶಿವಾನಂದ ಅವರನ್ನು ನೇಮಕ ಮಾಡಲಾಯಿತು.