ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಕೇವಲ ಅಧಿಕಾರಕ್ಕಾಗಿ ಮಾತ್ರವಲ್ಲದೇ ಜನರ ಸೇವೆ ಮಾಡುವುದು ಸಹ ಪಕ್ಷದ ಉದ್ದೇಶವಾಗಿದೆ. ಬೆಜೆಪಿ ರಾಷ್ಟೀಯ ವಿಚಾರಧಾರೆ ಗಳಿಗೆ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದು ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಷ್ಟ್ರೀಯ ವಿಷಯಗಳು ನರೇಂದ್ರ ಮೋದಿಜೀ ಸರಕಾರ ಬಂದ ಮೇಲೆ ಫಲಪ್ರದವಾಗಿವೆ.
ಈ ನಿಟ್ಟಿನಲ್ಲಿ ಪಕ್ಷದ ಪ್ರಮುಖರು ಕಾರ್ಯಕರ್ತರು ಅಧಿಕಾರವೂ ಸೇರಿದಂತೆ ಜನರ ಸೇವೆಯನ್ನು ಸಹ ಸೇವಾಹೀ ಸಂಘಟನ್ ಮೂಲಕ ನಿತ್ಯ ನಿರಂತರ ನೀಡುವಂತೆ ಕಾರ್ಯಕರ್ತರಲ್ಲಿ ವಿನಂತಿ ಮಾಡಿದರು.
ಅವರು ಸಿದ್ದಕಟ್ಟೆಯಲ್ಲಿ ಸಂಗಬೆಟ್ಟು ಮಹಾ ಶಕ್ತಿ ಕೇಂದ್ರವತಿಯಿಂದ ನಡೆದ ಸೇವಾಹೀ ಸಂಘಟನ್ ಪ್ರಯುಕ್ತ ಬಿಜೆಪಿ ಪಕ್ಷದ ಸಭೆಯಲ್ಲಿ ಮಾತನಾಡಿದರು.
ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ಪ್ರದಾನ ಕಾರ್ಯದರ್ಶಿ ಡೊಂಬಯ್ಯ ಅರಳ ಮಾತಾನಾಡಿ ಪಕ್ಷ ಕಟ್ಟಿದ ಹಿರಿಯರು ಯಾವುದೇ ಅಧಿಕಾರದ ಲಾಲಸೆ ಪಡೆಯದೇ ತ್ಯಾಗ, ಬಲಿದಾನಗಳ ಮೂಲಕ ನಿರಂತರ ಹೋರಾಟ ಮಾಡುತ್ತಾ ಬಂದಿರುವುದರಿಂದ ಇವತ್ತು ರಾಷ್ಟ್ರ ಮತ್ತು ಹಲವು ರಾಜ್ಯಗಳಲ್ಲಿ ಹಾಗೂ ಹಳ್ಳಿಯಿಂದ ದೆಹಲಿ ತನಕವೂ ಭಾರತಿಯ ಜನತಾ ಪಾರ್ಟಿ ಅಧಿಕಾರದಲ್ಲಿ ಇದೆ.ಇದಕ್ಕೆಲ್ಲ ಸ್ಫೂರ್ತಿ ನೀಡಿದ ಶ್ಯಾಮ್ ಪ್ರಸಾದ್ ಮುಖರ್ಜಿ ಯವರನ್ನು ನೆನೆಪಿಸುವ ಅಗತ್ಯವಿದೆ ಎಂದರು.
ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ್ ಶೆಟ್ಟಿ ಸೇವಾಹೀ ಸಂಘಟನೆ ಹಿನ್ನಲೆ ಬಗ್ಗೆ ಮಾಹಿತಿ ನೀಡಿದರು.
ಮತದಾರರ ಪಟ್ಟಿ ಮಂಡಲ ಪ್ರಮುಖ್ ರಮಾನಾಥ ರಾಯಿ ಸೇವಾಹೀ ಸಂಘಟನ್ ಗ್ರಾಮ ಪ್ರಮುಖರ ಪಟ್ಟಿ ಘೋಷಣೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿ ಬಾಳಿಕೆ ಮಾತಾನಾಡಿ ಪಕ್ಷದ ಸಂಘಟಣೆ ವಿಚಾರದಲ್ಲಿ ಪಕ್ಷದ ಪ್ರಮುಖರು, ಕಾರ್ಯಕರ್ತರು ಸಕ್ರಿಯವಾಗಿದ್ದು ಕೊಂಡು ಮುಂದಿನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಎಲ್ಲಾ ಸ್ಥಾನಗಳನ್ನು ಗೆಲ್ಲಿಸಲು ಶತಸಿದ್ಧರಾಗಬೇಕು ಎಂದರು.
ಪಕ್ಷದಲ್ಲಿ ಶಿಸ್ತು ಅತೀ ಅಗತ್ಯವಾಗಿದ್ದು, ಆಶಿಸ್ತು, ಪಕ್ಷ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ.ಪಕ್ಷದ ಕೆಲಸ ಕಾರ್ಯ ಮಾಡಲು ಕಾರ್ಯಕರ್ತರು ಉತ್ಸುಕಾ ಗಿದ್ದಾರೆ ಎಂದರು.
ಸಭೆಯಲ್ಲಿ ಪಕ್ಷದ ವಿವಿಧ ಮೋರ್ಚಾಗಳ ಪಧಾಧಿಕಾರಿಗಳು, ತಾಲೂಕು ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಸಂಗಬೆಟ್ಟು ಮಹಾ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪುರುಷೋತ್ತಮ ಶೆಟ್ಟಿ ಧನ್ಯವಾದವಿತ್ತರು.