ಬಂಟ್ವಾಳ: ಬಂಟ್ವಾಳ ತಾ.ಬಡಗಕಜೆಕಾರು ಗ್ರಾ.ಪಂ. ಮಾಜಿ ಸದಸ್ಯ, ತೆಂಕಕಜೆಕಾರು ಗ್ರಾಮದ ಅಂಬಡೆಮಾರು ನಿವಾಸಿ ಗಂಗಾಧರ ಪೂಜಾರಿ ಅವರ ಮನೆಯಲ್ಲಿ ಶುಭಕಾರ್ಯ ನಿಮಿತ್ತ ಕೊರೊನಾ ವಾರಿಯರ‍್ಸ್ ಗಳಾದ ಪುಂಜಾಲಕಟ್ಟೆ ಠಾಣಾಧಿಕಾರಿ ಸೌಮ್ಯಾ ಜೆ., ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರದ ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ನಿಶ್ಮಿತಾ, ಆಶಾ ಕಾರ್ಯಕರ್ತೆಯರಾದ ಗೌರಿ ಎನ್.ಭಟ್, ಸೋಮಾವತಿ, ಚಂದ್ರಿಕಾ, ರೂಪಾ, ಶಶಿಕಲಾ ಅವರನ್ನು ಸಮ್ಮಾನಿಸಲಾಯಿತು. ಜಿ.ಪಂ. ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಗ್ರಾ.ಪಂ.ಸದಸ್ಯರಾದ ಸತೀಶ್ ಬಂಗೇರ, ಸುರೇಶ್ ಬಾರ‍್ದೊಟ್ಟು, ಉಷಾ, ದೇವದಾಸ್ ಅಬುರ,ಯಕ್ಷ ಕಲಾವಿದ ದಿವಾಕರ ದಾಸ್ ಕಾವಳಕಟ್ಟೆ, ಗುರುರಾಜ್, ಚಂದ್ರಾವತಿ,ಯೋಗಿತಾ ಮತ್ತಿತರರು ಉಪಸ್ಥಿತರಿದ್ದರು