ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಇವರ ಮುತುರ್ವಜಿಯ ಮೂಲಕ ಮಂಜೂರಾತಿ ಗೊಂಡ ಕೆ . ಎಸ್. ಆರ್. ಟಿ. ಸಿ. ಸಾರಿಗೆ ಸುರಕ್ಷಾ ಯೋಜನೆಯ ಸಂಚಾರಿ ಐಸಿಯು ಬಸ್ಸ್ ಸಂಗಬೆಟ್ಟು ಗ್ರಾಮ ಪಂಚಾಯತ್ ಆವರಣದಲ್ಲಿ ಜುಲೈ 19 ರಂದು ಆಗಮಿಸಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಿದರು. ಸುಮಾರು ನೂರಕ್ಕೂಹೆಚ್ಚು ಜನರು ತಮ್ಮ ತಮ್ಮ ಸಕ್ಕರೆ ಖಾಯಿಲೆ ಪರೀಕ್ಷೆ, ಬಿಪಿ, ಇನ್ನಿತರ ಆರೋಗ್ಯ ಪರೀಕ್ಷೆ ಮಾಡಿಕೊಂಡರು.
ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಪೂಜಾರಿ,ಉಪಾಧ್ಯಕ್ಷೆ ವಿಮಲಾ ಮೋಹನ್, ತಾಲೂಕು ಪಂಚಾಯತ್ ನ ಮಾಜಿ ಸದಸ್ಯ ಪ್ರಭಾಕರ ಪ್ರಭು, ಮಾಜಿ ಎ. ಪಿ. ಎಂ. ಸಿ. ಸದಸ್ಯ ರತ್ನಕುಮಾರ್ ಚೌಟ ತಮ್ಮ ಆರೋಗ್ಯ ತಪಾಸಣೆ ಮಾಡುವುದರೊಂದಿಗೆ ಈ ವ್ಯವಸ್ಥೆ ಮಾಡಿದ ಶಾಸಕ ರಾಜೇಶ್ ನಾಯ್ಕ್ ರವರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವ್ಯವಸ್ಥೆ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ ಕುಲಾಲ್, ಉದಯ ಪೂಜಾರಿ, ದಾಮೋದರ ಪೂಜಾರಿ.ಸುನೀಲ್ ಶೆಟ್ಟಿಗಾರ್,ವಿದ್ಯಾ ಪ್ರಭು, ಶಕುಂತಲಾ, ಪ್ರೇಮ, ಬೇನಾಡಿಕ್ಟ ಡಿ, ಕೊಸ್ತ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮ ನಾಯ್ಕ್, ಕಾರ್ಯದರ್ಶಿ ರೋಹಿಣಿ ಪ್ರಮುಖರಾದ ಪ್ರಭಾಕರ್ ಐಗಲ್,ದಿನೇಶ್ ಶೆಟ್ಟಿ ದಂಬೆ ದಾರ್ ದೀಪಕ್ ಶೆಟ್ಟಿಗಾರ್ ಐಸಿಯು ಬಸ್ಸ್ ನ ವೈದ್ಯರು ಸಿಬ್ಬಂದಿ ವರ್ಗ ಪಂಚಾಯತ್ ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.