ಬಂಟ್ವಾಳ: ರಾಯಿ ಗ್ರಾಮಕ್ಕೆ ಆಗಮಿಸಿದ KSRTC ಸಾರಿಗೆ ಸುರಕ್ಷಾ ಸಂಚಾರಿ ICU BUS ನ್ನು ರಾಯಿ ಗ್ರಾಮ ಪಂಚಾಯತ್ ವತಿಯಿಂದ ಸ್ವಾಗತಿಸಲಾಯಿತು.
ಜನಪ್ರೀಯ ಶಾಸಕರು ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಇವರ ವಿಶೇಷ ಆರೋಗ್ಯ ಕಾಳಜಿಯ ಬಂಟ್ವಾಳ ತಾಲೂಕಿನ ಜನತೆಗೆ ಉತ್ಕೃಷ್ಟವಾದ ಉಚಿತ ಆರೋಗ್ಯ ಸೇವೆಯನ್ನು ರಾಯಿ ಗ್ರಾಮಸ್ಥರು ಸದುಪಯೋಗಿಸಿಕೊಂಡರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನಾ ಉಪಾಧ್ಯಕ್ಷರಾದ ರಶ್ಮಿತ್ ಶೆಟ್ಟಿ ಕೈತ್ರೋಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಧು ಟಿ. ಎಲ್. ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು ಡಾ ಮನೋನ್ಮನಿ, ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ರಾಯಿ ಬೆಟ್ಟು, ರವೀಂದ್ರ ಪೂಜಾರಿ ಬದನಡಿ, ದಿನೇಶ್ ಶೆಟ್ಟಿ, ಸಂತೋಷ್ ಗೌಡ, ಗುಣವತಿ, ಪುಷ್ಪವತಿ, ಟಾರ್ಸ್ಕ್ ಪೋರ್ಸ್ ಸದಸ್ಯರುಗಳು, ಆರೋಗ್ಯ ಸಿಬ್ಬಂದಿಗಳು, ಪಂಚಾಯತ್ ಸಿಬ್ಬಂದಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ರಕ್ತದೊತ್ತಡ, ರಕ್ತಪರೀಕ್ಷೆ ಇನ್ನಿತರ ಸಾಮಾನ್ಯ ಪರೀಕ್ಷೆಯನ್ನು ಮಾಡಲಾಯಿತು.