Tuesday, October 17, 2023

ರಾಜ್ಯದ ನೂತನ ರಾಜ್ಯಪಾಲರಾಗಿ ತಾವರ್‌ಚಂದ್‌ ಗೆಹ್ಲೋಟ್‌ ನೇಮಕ

Must read

ಬೆಂಗಳೂರು : ಪ್ರಮುಖ ಪುನಾರಚನೆಯಲ್ಲಿ, ಮಂಗಳವಾರ ಹಲವಾರು ರಾಜ್ಯಗಳ ರಾಜ್ಯಪಾಲರನ್ನು ನೇಮಿಸಲಾಯಿತು. ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ರಾಷ್ಟ್ರಪತಿ ಭವನ ಆದೇಶ ಹೊರಡಿಸಿದೆ.ಈ ಮೂಲಕ ಕರ್ನಾಟಕದ 19ನೇ ರಾಜ್ಯಪಾಲರಾಗಿ ಗೆಹ್ಲೋಟ್ ಅಧಿಕಾರ ವಹಿಸಿಕೊಳ್ಳುವ ಮೂಲಕ ವಜುಬಾಯಿ ವಾಲಾ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಂಪುಟ ವಿಸ್ತರಣೆ ಸಂಬಂಧ ನಡೆಯಲಿರುವ ಬಹುನಿರೀಕ್ಷಿತ ಸಭೆಗೆ ಮುನ್ನ ರಾಜ್ಯಪಾಲರುಗಳ ನೇಮಕದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿ ಕೆಲಸ ಮಾಡಿದ ಅನುಭವ ಗೆಹ್ಲೋಟ್ ಅವರಿಗಿದೆ.

ಹಿಮಾಚಲ ಪ್ರದೇಶದ ಉಸ್ತುವಾರಿ ವಹಿಸಿದ್ದ ದತ್ತಾತ್ರೇಯ ಈಗ ಹರಿಯಾಣದಲ್ಲಿ ಸ್ಥಾನ ವಹಿಸಿಕೊಳ್ಳಲಿದ್ದು, ಹರಿ ಬಾಬು ಕಂಬಂಪತಿ ಅವರನ್ನು ಮಿಜೋರಾಂ ನ ರಾಜ್ಯಪಾಲರಾಗಿ, ಮಂಗುಭಾಯಿ ಚಗನ್ ಭಾಯ್ ಪಟೇಲ್ ಅವರಿಗೆ ಮಧ್ಯಪ್ರದೇಶ, ರಾಜೇಂದ್ರನ್ ವಿಶ್ವನಾಥ ಅರ್ಲೇಕರ್ ಹಿಮಾಚಲ ಪ್ರದೇಶ, ಪಿಎಸ್ ಶ್ರೀಧರನ್ ಪಿಳ್ಳೈ ಗೋವಾ, ಸತ್ಯದೇವ್ ನಾರಾಯಣ ಆರ್ಯ ತ್ರಿಪುರಾ ಮತ್ತು ರಮೇಶ್ ಬೈಸ್ ಜಾರ್ಖಂಡ್ ಅವರನ್ನು ನೀಡಲಾಗಿದೆ.

More articles

Latest article