ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಅವರ ಬಗ್ಗೆ ವಾಟ್ಸಪ್ ಗ್ರೂಪ್ ನಲ್ಲಿ ಮಾನಹಾನಿಕರ ಸುದ್ದಿ ಹಬ್ಬಿಸಿದ ವ್ಯಕ್ತಿ ಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ವಿಟ್ಲ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಾಜಿ ಸಚಿವ ಬಿ.ರಮಾನಾಥ ರೈ ಅವರ ಬಗ್ಗೆ ಇಲ್ಲಸಲ್ಲದ ಮಾನಹಾನಿ ಕರ ವಿಷಯಗಳ ನ್ನು 9731350751 ಮೊಬೈಲ್ ನಂ ನಿಂದ ವಾಟ್ಸಪ್ ಗ್ರೂಪ್ ಗಳಿಗೆ ಶೇರ್ ಮಾಡಿದ್ದಾರೆ.
ಅನಗತ್ಯ ಮತ್ತು ಆಧಾರರಹಿತ ವಿಷಯಗಳಾದ ” ಕರ್ನಾಟಕದಲ್ಲಿ 23 ಹಿಂದೂ ಕಾರ್ಯ ಕರ್ತರ ಕೊಲೆ ಪ್ರಕರಣ ದಲ್ಲಿ ಪರೋಕ್ಷವಾಗಿ ಭಾಗಿಯಾಗಿ, ಕಲ್ಲಡ್ಕ ಶಾಲೆ ಯ ಬಡಮಕ್ಕಳ ಹೊಟ್ಟೆಯ ಹಸಿವಿನ ಅನ್ನವನ್ನು ಕಸಿದ ದುರುಳ, ಇದ್ದ ಕಡೆ ಎಲ್ಲ ತೆಂಗಿನ ಕಾಯಿ ಹೊಡೆದು ಸಂಸದರ ಅನುದಾನವನ್ನು ತನ್ನ ದು ಎಂದು ಹೇಳುತ್ತಾ ತಿರುಗುವ ಬಡಪಾಯಿ ರಮಾನಾಥ ರೈ ” ಎಂದು ಬರೆದು ಸಾಲೆತ್ತೂರು ಗ್ರಾಮದ ಅಗರಿ ಬಾಳಿಕೆ ನಿವಾಸಿ ಪ್ರಶಾಂತ್ ಶೆಟ್ಟಿ ಅವರು ಎಲ್ಲಾ ಗ್ರೂಪ್ ಗಳಿಗೆ ಪಾರ್ವಡ್ ಮಾಡಿದ್ದಾರೆ.
ಇದೊಂದು ಗಂಭೀರ ಆರೋಪವಾಗಿದ್ದು, ಈ ಆರೋಪ ಮಾಡುವುದರ ಮೂಲಕ ಪರಿಸರದಲ್ಲಿ ಗಲಭೆ, ಶಾಂತಿ ಮತ್ತು ಸೌಹಾರ್ದ ವನ್ನು ಕದಡುವ ಹುನ್ನಾರ ಇದೆ, ಆದುದರಿಂದ ಈ ಪ್ರಕರಣ ವನ್ನು ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಆರೋಪಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.