ಪುಂಜಾಲಕಟ್ಟೆ,ಜು.21: ಬದ್ರಿಯಾ ಜುಮಾ ಮಸೀದಿ ಪುಂಜಾಲಕಟ್ಟೆಯಲ್ಲಿ ಈದುಲ್ ಅದ್ಹಾ ಬಕ್ರೀದ್ ಹಬ್ಬವನ್ನು ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಸರಳವಾಗಿ ಆಚರಿಸಲಾಯಿತು.
ಬೆಳಿಗ್ಗೆ 7 ಗಂಟೆಗೆ ಈದ್ ನಮಾಝ್ ಹಾಗೂ ಖುತುಬಾ ಪಾರಾಯಣ ನೆರವೇರಿಸಲಾಯಿತು ಇದಕ್ಕೂ ಮೊದಲು ಬಕ್ರೀದ್ ಸಂದೇಶ ಭಾಷಣ ಮಾಡಿದ ಖತೀಬ್ ಅಶ್ರಫ್ ಫೈಝಿ ಉಸ್ತಾದ್ ಈದುಲ್ ಅದ್ಹಾ ಪ್ರಯುಕ್ತ ನಡೆಸುವ ಪ್ರಾಣಿ ಬಲಿದಾನ ಮತ್ತು ಇಸ್ಲಾಮಿನ ಪವಿತ್ರ ಹಜ್ಜ್ ಕರ್ಮದ ಬಗ್ಗೆ ವಿವರಿಸಿದರು.