ಬಂಟ್ವಾಳ: ತಾವರೆಕೆರೆ ಸಮೀಪ ಜುಲೈ 5 ರಂದು ಸೋಮವಾರ ಕಾರು ಹಾಗೂ ಕಂಟೈನರ್ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕುಂದಾಪುರದ ಹಿರಿಯ ಛಾಯಾಗ್ರಾಹಕ ನಾವುಂದ ಮಾನಸ ಸ್ಟುಡಿಯೋ ಮಾಲಕ ಅಶೋಕ್ ಕುಮಾರ್ ಶೆಟ್ಟಿ (58) ಇವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯ ಲ್ಲಿ ನಿಧನರಾಗಿದ್ದಾರೆ.
ಅಶೋಕ್ ಕುಮಾರ್ ಶೆಟ್ಟಿ ಅವರು ತಮ್ಮ ಪುತ್ರ ಹಾಗೂ ಕುಮಾರ್ ಎಂಬವರ ಜೊತೆ ಮದುವೆ ಕಾರ್ಯಕ್ರಮವೊಂದರ ಚಿತ್ರೀಕರಣ ಮುಗಿಸಿ ಊರಿಗೆ ವಾಪಸು ಹಿಂದಿರುಗುತ್ತಿದ್ದ ವೇಳೆ ಕಾರು ಹಿಂಬದಿಯಿಂದ ಕಂಟೈನರ್ ಗೆ ಡಿಕ್ಕಿ ಹೊಡೆದಿತ್ತು…
ಅಶೋಕ್ ಕುಮಾರ್ ಶೆಟ್ಟಿ ಅವರು ಕುಂದಾಪುರ ತಾಲೂಕು ಛಾಯಾ ಗ್ರಾಹಕರ ಸಂಘ ಹಾಗೂ ರಾಜ್ಯ ಛಾಯಾಗ್ರಾಹಕರ ಸಂಘಟನೆ ಯ ಮಾಜಿ ಅಧ್ಯಕ್ಷರು,ಹಾಗೂ ಸಂಚಾಲಕರಾಗಿಯೂ ಕಾರ್ಯ ನಿರ್ವಹಿಸಿದ್ಧರು.
ಒಬ್ಬ ಅದ್ಬುತ ಛಾಯಾಗ್ರಾಹಕ, ಸ್ನೇಹಜೀವಿ, ಸಂಘಟಕ ಸಮಾಜ ಸೇವಕರಾಗಿದ್ದ ಸ್ನೇಹಿತ ಅಶೋಕ್ ಕುಮಾರ್ ಶೆಟ್ಟಿಯವರ ಅಪಘಾತ ದಲ್ಲಿ ನಿಧನರಾಗಿದ್ದಾರೆ.