ಬಂಟ್ವಾಳ: ಸ್ವಚ್ಚ ಗ್ರಾಮದ ಪರಿಕಲ್ಪನೆಯ ದೃಷ್ಟಿಯಿಂದ ಪೆರಾಜೆ ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯಬಾರದು ಎಂದು ಪೆರಾಜೆ ಗ್ರಾಮ ಪಂಚಾಯತ್ ಮನವಿ ಮಾಡಿದೆ.
ಪೆರಾಜೆ ಗ್ರಾಮದ ಸಾರ್ವಜನಿಕ ರಸ್ತೆ ಹಾಗೂ ರಸ್ತೆ ಬದಿ / ಸಾರ್ವಜನಿಕ ಸ್ಥಳ / ಶಾಲೆ ಮತ್ತು ಶಾಲಾ ಆವರಣ /ಅಂಗನವಾಡಿ ಹಾಗೂ ಸಾರ್ವಜನಿಕ ಸ್ಮಶಾನ ಪ್ರದೇಶಗಳಲ್ಲಿ ಪ್ಲಾಸ್ಟಿಕ್ , ಕಸ , ಬಾಟಲ್ ಮತ್ತು ಯಾವುದೇ ರೀತಿಯ ತ್ಯಾಜ್ಯಗಳನ್ನು ಎಸೆಯುವುದನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ .
ಕಸ, ಹಾಗೂ ಯಾವುದೇ ರೀತಿಯ ತ್ಯಾಜ್ಯ ಎಸೆಯುವುದು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೆರಾಜೆ ಗ್ರಾ.ಪಂ.ಪ್ರಕಟನೆ ನೀಡಿದೆ.