ಬಂಟ್ವಾಳ: ಬಂಟ್ವಾಳ ತಾಲೂಕಿನ 18 ಗ್ರಾಮ ಪಂಚಾಯತ್‌ಗಳ ಪಿಡಿಒಗಳನ್ನು ಇತರ ಪಂಚಾಯತ್‌ಗಳಿಗೆ ವರ್ಗಾವಣೆ ಮಾಡಿ ಸರಕಾರ ಆದೇಶ ನೀಡಿದೆ.
ಇರ್ವತ್ತೂರು ಪಂಚಾಯತ್‌ನ ಪಿಡಿಒ ಅವಿನಾಶ್ ನೆಟ್ಲಮುಡ್ನೂರು ಪಂಚಾಯತ್‌ಗೆ, ಅರಂಬೋಡಿ ಪಂಚಾಯತ್‌ನ ಪಿಡಿಒ ಗಣೇಶ್ ಇರ್ವತ್ತೂರು ಪಂಚಾಯತ್‌ಗೆ, ಬಾಳೆಪುಣಿ ಪಂಚಾಯತ್‌ನ ಪಿಡಿಒ ಸುನೀಲ್‌ಕುಮಾರ್ ಕಡೇಶ್ವಾಲ್ಯ ಪಂಚಾಯತ್‌ಗೆ, ಕಾವಳಮೂಡೂರು ಪಂಚಾಯತ್‌ನ ಪಿಡಿಒ ಸುಧಾಮಣಿ ನಾವೂರು ಪಂಚಾಯತ್‌ಗೆ, ಸಜೀಪಮೂಡ ಪಂಚಾಯತ್‌ನ ಪಿಡಿಒ ನಿರ್ಮಲ ಮಂಚಿ ಪಂಚಾಯತ್‌ಗೆ, ಕರಿಯಂಗಳ ಪಂಚಾಯತ್‌ನ ಪಿಡಿಒ ನಯನಕುಮಾರಿ ಅಮ್ಮುಂಜೆ ಪಂಚಾಯತ್‌ಗೆ, ನಾವೂರು ಪಂಚಾಯತ್‌ನ ಪಿಡಿಒ ರಚನ್‌ಕುಮಾರ್ ಕಾವಳಮೂಡೂರು ಪಂಚಾಯತ್‌ಗೆ, ಪಿಲಾತಬೆಟ್ಟು ಪಂಚಾಯತ್‌ನ ಪಿಡಿಒ ರಾಜಶೇಖರ ರೈ ಚೆನ್ನೈತ್ತೋಡಿ ಪಂಚಾಯತ್‌ಗೆ, ಕಳ್ಳಿಗೆ ಪಂಚಾಯತ್‌ನ ಪಿಡಿಒ ಮಾಲಿನಿ ಕರಿಯಂಗಳ ಪಂಚಾಯತ್‌ಗೆ, ಕಡೇಶ್ವಾಲ್ಯ ಪಂಚಾಯತ್‌ನ ಪಿಡಿಒ ಚೆನ್ನಪ್ಪ ನಾಯ್ಕ ಬಿ. ಬಾಳೆಪುಣಿ ಪಂಚಾಯತ್‌ಗೆ, ಚೆನ್ನೈತೋಡಿ ಪಂಚಾಯತ್‌ನ ಪಿಡಿಒ ಯಮನಪ್ಪ ಕೊರವ ಪಿಲಾತಬೆಟ್ಟು ಪಂಚಾಯತ್‌ಗೆ, ಮಂಚಿ ಪಂಚಾಯತ್‌ನ ಪಿಡಿಒ ಮಾಯಾಕುಮಾರಿ ಸಜೀಪಮೂಡ ಪಂಚಾಯತ್‌ಗೆ, ಮಾಣಿ ಪಂಚಾಯತ್‌ನ ಪಿಡಿಒ ನಾರಾಯಣ ಗಟ್ಟಿ ಬರಿಮಾರು ಪಂಚಾಯತ್‌ಗೆ, ನೆಟ್ಲಮುಡ್ನೂರು ಪಂಚಾಯತ್‌ನ ಪಿಡಿಒ ನಿಶಾಂತ್ ಬಿ.ಆರ್. ವೀರಕಂಭ ಪಂಚಾಯತ್‌ಗೆ, ಸರಪಾಡಿ ಪಂಚಾಯತ್‌ನ ಪಿಡಿಒ ಪ್ರಶಾಂತ್ ಬಿ. ಬೆಳ್ತಂಗಡಿಯಲ್ಲಿ ಖಾಲಿ ಇರುವ ಪಂಚಾಯತ್‌ಗೆ, ಬಡಗಬೆಳ್ಳೂರು ಪಂಚಾಯತ್‌ನ ಪಿಡಿಒ ಆನಂದ್ ಮಡಿವಾಳ ಕಳ್ಳಿಗೆ ಪಂಚಾಯತ್‌ಗೆ, ಬರಿಮಾರು ಪಂಚಾಯತ್‌ನ ಪಿಡಿಒ ಲಕ್ಷ್ಮಣ್ ಎಚ್.ಕೆ. ಬಡಗಬೆಳ್ಳೂರು ಪಂಚಾಯತ್‌ಗೆ, ವೀರಕಂಭ ಪಂಚಾಯತ್‌ನ ಪಿಡಿಒ ಗಿರಿಜಾ ಮಾಣಿ ಪಂಚಾಯತ್‌ಗೆ ವರ್ಗಾವಣೆಗೊಂಡಿದ್ದಾರೆ.