ಬಂಟ್ವಾಳ: ಬಂಟ್ವಾಳ ಪೇಟೆಯ ಹೃದಯ ಭಾಗದಲ್ಲಿರುವ ವಾಸುದೇವ ಟವರ್ಸ್ ನಲ್ಲಿ ನೂತನವಾಗಿ ಆರಂಭವಾದ ಹವಾನಿಯಂತ್ರಿತ ತುಳಸಿ ಹರ್ಬಲ್ ಬ್ಯೂಟಿ ಪಾರ್ಲರ್ ಶುಕ್ರವಾರ ಶುಭಾರಂಭಗೊಂಡಿತು.
ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಮೇಕಪ್ ಆರ್ಟಿಸ್ಟ್ ಚೇತನಾ ಎಸ್. ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಮೇಕಪ್ ಆರ್ಟಿಸ್ಟ್ ಪೂರ್ಣಿಮಾ ರತನ್, ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ, ಉದ್ಯಮಿ ಶಿವಾಜಿ ಜಾಧವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪಾರ್ಲರ್ ನ ಮಾಲಕಿಯರ ಕುಟುಂಬದ ಸದಸ್ಯರಾದ ಚಂದ್ರಶೇಖರ್ ದೆಚ್ಚಾರು, ಸುನಂದಾ ಚಂದ್ರಶೇಖರ್, ನಾರಾಯಣ ಪೂಜಾರಿ ಬಜ, ಪುಷ್ಪಾ ನಾರಾಯಣ, ವೇದಾವತಿ ದೇವಪ್ಪ ಪೂಜಾರಿ, ರೋಹಿತ್ ಕೋಟ್ಯಾನ್, ಚೇತನ್ ಅಮೀನ್ ಬಜ ಮೊದಲಾದವರು ಪಾಲ್ಗೊಂಡಿದ್ದರು.
ಪಾರ್ಲರ್ ನ ಮಾಲಕಿಯರಾದ ದೀಪಾ ರೋಹಿತ್ ಹಾಗೂ ಪುಷ್ಪಾ ಚೇತನ್ ಸ್ವಾಗತಿಸಿದರು.