ಬಂಟ್ವಾಳ: ಆಶ್ರಯ ಯೋಜನೆ ಯಡಿ ಮುಂದಿನ ಮಾರ್ಚ್ ನೊಳಗೆ ಮನೆ ವಿತರಿಸಲು ಸರಕಾರ ಉದ್ದೇಶಸಿದ್ದು, ಅರ್ಹರು ಅರ್ಜಿ ಸಲ್ಲಿಸಲು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅವರು ತಿಳಿಸಿದರು.
ಅವರು ಬಂಟ್ವಾಳ, ಪಾಣೆಮಂಗಳೂರು ಹಾಗೂ ವಿಟ್ಲ ಹೋಬಳಿಗೆ ಸೇರಿ ಒಟ್ಟು 55 ಮಂದಿಗೆ ಪಾಕೃತಿಕ ವಿಕೋಪದಡಿ 3.12 ಲಕ್ಷ ಪರಿಹಾರದ ಚೆಕ್ ವಿತರಿಸಲಾಯಿತು. ಇದೇ ವೇಳೆ ಪಾಣೆಮಂಗಳೂರು, ಬಂಟ್ವಾಳ ಹಾಗೂ ವಿಟ್ಲ ಹೋಬಳಿಯ 36 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ವಿತರಿಸಿ ಮಾತನಾಡಿದರು.
ಡೀಮ್ಡ್ ಫಾರೆಸ್ಟ್ ನಲ್ಲಿ ಹಲವಾರು ಸಮಯದಿಂದ ವಾಸ್ತವ್ಯವಿದ್ದವರಿಗೆ ಮನೆ ನೀಡಲು ಇದ್ದ ಸಮಸ್ಯೆ ಯನ್ನು ನಿವಾರಿಸಲಾಗಿದ್ದು ಬಂಟ್ವಾಳ ಕ್ಷೇತ್ರದ ವಿಟ್ಲಪಡ್ನೂರು ಮತ್ತು ಉಳಿ ಗ್ರಾಮದ ಫಲಾನುಭವಿಗಳಿಗೆ ಹಕ್ಕು ಪತ್ರ ಶೀಘ್ರದಲ್ಲೇ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಮೂರು ಹೋಬಳಿಗೆ ಸಂಬಂಧಿಸಿ ಈ ದಿನ ಮೂವತ್ತಾರು ಫಲಾನುಭವಿಗಳಿಗೆ ಹಕ್ಕು ಪತ್ರ ಪತ್ರ ವಿತರಿಸಲಾಗಿದ್ದರೆ ಪಾಕೃತಿಕ ವಿಕೋಪದಡಿ 55 ಮಂದಿಗೆ ಪರಿಹಾರ ದ ಚೆಕ್ ನ್ನು ವಿತರಿಸಲಾಗಿದೆ.ಬಂಟ್ವಾಳ ಕ್ಷೇತ್ರದಲ್ಲಿ ಈಗಾಗಲೇ ಹಕ್ಕು ಪತ್ರ ವಂಚಿತರಿಗೆ ಹಕ್ಕು ಪತ್ರವಿತರಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗಿದೆ.ಮುಂದಿನ ದಿನಗಳಲ್ಲಿ ಬಾಕಿಯಿರುವ ಎಲ್ಲಾ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು.
ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಬಿಜೆಪಿ ಪ್ರಮುಖರಾದ ಸುನಿಲ್ ಕಾಯರ್ ಮಾರ್, ಜನಾರ್ದನ ಬೊಂಡಾಲ, ಸೀತಾರಾಮ ಅಗೊಳಿಬೆಟ್ಟು, ರಾಮಕೃಷ್ಣ ಮಯ್ಯ, ಮನೋಜ್ ಕಳ್ಳಿಗೆ, ದಿನೇಶ್ ಪೂಜಾರಿ, ವಿಜಯ ಅಮ್ಟಾಡಿ, ಕಂದಾಯ ನಿರೀಕ್ಷಕ ರಾದ ರಾಮಕಾಟಿಪಳ್ಳ, ನವೀನ್ ಬೆಂಜನಪದವು, ದಿವಾಕರ ಮುಗುಳಿ, ಗ್ರಾಮ ಕರಣೀಕರಾದ ಕರಿಬಸಪ್ಪ ನಾಯಕ್, ಮಂಜುನಾಥ್ ಕೆ.ಎಚ್, ಕುಮಾರ್ ಟಿ.ಸಿ. ವೈಶಾಲಿ, ಪ್ರದೀಪ್ ಕುಲಾಲ್