ಯಕ್ಷಮಿತ್ರರು ಪಂಜಿನಡ್ಕ ಇವರ **ಬೆನ್ನಿಡ್ ಬೆನ್ ಕುಲ್ದು ತಿನ್ ಪರಿಕಲ್ಪನೆಯಲ್ಲಿ** ಗದ್ದೆ ನಾಟಿ ಕೆಲಸ ಕೊಲಕಾಡಿ ಮಹಾಬಲ ಕುಂದರ್ ಹಾಗೂ ಶಿಮಂತೂರು ಸತೀಶ್ ಶೆಟ್ಟಿಯವರ ಗದ್ದೆಯಲ್ಲಿ ನಡೆಯಿತು.
ಮುಲ್ಕಿ ವಲಯದ ಕೃಷಿಕ ರಾಜಕೀಯ, ಧಾರ್ಮಿಕ, ಸಾಮಾಜಿಕ ನಾಯಕ ಗೋಪಿನಾಥ್ ಪಡಂಗ ನಾಟಿ ಮಾಡಿ ಚಾಲನೆ ನೀಡಿ ಯುವಕರು ಯಕ್ಷಗಾನ ರಂಗದಲ್ಲಿ ಮಾತ್ರವಲ್ಲದೆ ಕೃಷಿ ರಂಗದಲ್ಲಿಯೂ ತೊದಗಿಸಿಕೊಂಡಿರುವುದು ನಿಜವಾಗಿಯೂ ಅಭಿನಂದನರ್ಹವಾಗಿದೆ . ಕಳೆದವರ್ಷವೂ ನಮ್ಮ ಪಡಂಗ ಮನೆತನದ ಗದ್ದೆಯಲ್ಲಿಯೂ ಕೃಷಿ ಕಾರ್ಯವನ್ನು ಮಾಡಿದ್ದು ಬರಿ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗದೆ ನಿರಂತರವಾಗಿ ಮಾಡುತಿರುವುದು ಹಾಗೂ ಇನ್ನು ಮುಂದೆಯೂ ಇಂಥ ಕಾರ್ಯಕ್ರಮವನ್ನು ಮಾಡಿದ್ದಲ್ಲಿ ನಮ್ಮ ಸಹಕಾರ ಯಾವತ್ತಿಗೂ ಇದೆ ಎಂದು ಯಕ್ಷ ಮಿತ್ರ ಪಂಜಿನಡ್ಕದ ಸದಸ್ಯರಿಗೆ ಹುರಿದುಂಬಿಸಿದರು. ಬಳಿಕ ಮುಖ್ಯ ಅತಿಥಿಯಾಗಿ ಆಗಮಿಸಿದ ಪಾವಂಜೆ ಮೇಳದ ಮುಖ್ಯ ಸ್ತ್ರೀ ವೇಷದಾರಿ ಅಕ್ಷಯ ಮಾರ್ನಾಡ್ ಮಾತನಾಡಿ ಯಕ್ಷ ಮಿತ್ರರು ತಂಡಕ್ಕೆ ನನ್ನನ್ನು ಸೇರಿಸಿ ಕೊಂಡದ್ದು ಸಂತೋಷವಾಗಿದೆ. ಕೃಷಿ ಬದುಕಿನ ಕಷ್ಟಗಳ ಬಗ್ಗೆ ತಿಳಿದು ಕೊಳ್ಳುವುದಕ್ಕೆ ಈ ಕಾರ್ಯಕ್ರಮ ಉತ್ತಮ ಅವಕಾಶವಾಗಿದೆ. ದುಡಿಯುವ ರೈತನ ಬೆವರ ಹನಿ ನಾವು ತಿನ್ನುವ ಒಂದೊಂದು ತುತ್ತಾಗಿದೆ. ರೈತರೆ ದೇಶದ ಬೆನ್ನೆಲುಬು ಹಾಗೂ ಹಸಿರು ಕ್ರಾಂತಿಯಿಂದ ಉಸಿರು ನಿಲ್ಲುವುದು ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಾವಯವ ಗೊಬ್ಬರದ ಬಗ್ಗೆ ಅದರ ಉಪಯೋಗ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಅದರ ಪಾತ್ರ, ವಿವಿಧ ಬೆಳೆಗಳಿಗೆ ಅದರ ಹಾಕುವ ಪ್ರಮಾಣ ಗಳ ಬಗ್ಗೆ ಸಂತೋಷ್ ನೆಲಗುಡ್ಡೆ ಯವರು ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಸ್ಥಳ ಅವಕಾಶವನ್ನು ಮಹಾಬಲ ಕುಂದರ್ ರವರ ಪುತ್ರ ಗುರುಪ್ರಸಾದ್, ಯಕ್ಷ ಮಿತ್ರರು ತಂಡದ ಅಧ್ಯಕ್ಷ ಗುರುರಾಜ್ ಭಟ್, ಸಂಚಾಲಕರು ಸುರೇಶ್ ಕೊಲೆಕಾಡಿ, ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಸ್ಥೆಯ ಮಾಜಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು. ತಂಡದ ಸದಸ್ಯ ನಾಗೇಶ್ ಆಚಾರ್ಯ ಬೈಲೂರ್ ಸ್ವಾಗತಿಸಿದರು. ಹರಿಪ್ರಸಾದ್ ಶೆಟ್ಟಿ ಕಿನ್ನಿಗೋಳಿ ವಂದಿಸಿದರು .