Saturday, April 6, 2024

*ತುಳುವೆರೆಗಾದ್ ಪದೊ ಸಾಹಿತ್ಯ ದ ಉದ್ಘಾಟನಾ ಕಾರ್ಯಕ್ರಮ ಅಂತರ್ಜಾಲದಲ್ಲಿ*

ತುಳು ಭಾಷೆಯ ಬಗ್ಗೆ ಎಳೆಯ ಮಕ್ಕಳಲ್ಲಿ ವಿಶೇಷ ಆಸಕ್ತಿ ಮೂಡಿಸುವ ಸಲುವಾಗಿ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ಉಳಿಸುವ ಉದ್ದೇಶದಿಂದ ತುಳುವರ ಚಾವಡಿಯ ಮುತುವರ್ಜಿಯಿಂದ ಆರಂಭವಾದ ” ಜೋಕುಲೆಗಾದ್ ಪದ ಸಾಹಿತ್ಯ” ಕಾರ್ಯ ಗಾರವನ್ನು ಅಂತರ್ಜಾಲ ಮೂಲಕ

ತುಳುವೆರೆ ಚಾವಡಿಯ ಗೌರವಾಧ್ಯಕ್ಷರಾದ ಪುರುಷೋತ್ತಮ ಚೇಂಡ್ಲಾ ರವರು ದಂಪತಿ ಸಮೇತ ನಡೆಸಿದರು.

ಈ ಕಾರ್ಯಕ್ರಮದಲ್ಲಿ

ಆಶೀರ್ವಚನ ನೀಡಿದ ಒಡಿಯೂರು ಶ್ರೀ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ತಂತ್ರ ಯುಗ ವಿಶ್ವವನ್ನು ನೋಡಿದರೂ ವಿಶ್ವನಾಥನನ್ನು ನೋಡಲು ಸಾಧ್ಯವೇ? ದೇವರನ್ನು ಕಾಣಲು ಆದ್ಯಾತ್ಮಿಕ ಶಕ್ತಿ ಬೇಕು, ಅದನ್ನು ಮಕ್ಕಳಲ್ಲಿ ಕಾಣಬೇಕು ಮಾತ್ರ ಭಾಷೆ ಮರೆಯದೆ ಇತರ ಭಾಷೆ ಪ್ರೀತಿಸಿ ಎಂದರು,

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ದಯಾನಂದ ಜಿ ಕತ್ತಲ್ಸಾರ್ ಸಾಹಿತ್ಯ ವಿಜ್ಙಾಪನ ಪತ್ರ ಬಿಡುಗಡೆಗೊಳಿಸಿ ತಾಯಿ ತಂದೆ, ಭಯ ಭಕ್ತಿ, ದೈವ ದೇವರು ಇದನ್ನು ಮರೆಯದಿರಿ, ನಿಮ್ಮ ಮಡಕೆಯಲ್ಲಿ ನನ್ನ ತೊಗರಿ ಬೇಯಲು ಅವಕಾಶವಿರಲಿ ಎಂದರು. ಶಶಿಧರ ಕೋಟೆಯ ಮಾತು ಹಾಡು, ಮಾಹಿತಿ ನೀಡಿತು, ವಿ. ಮನೋಹರ್ ಆಟದಲ್ಲಿನ ಪಾಟ, ಪದ್ಯದಲ್ಲಿ ಕೊಂಡಾಟ ಇರಲಿ ಎಂದರು. ಡಾ! ಗಣನಾಥ್ ಎಕ್ಕಾರ್,ಸೂಕ್ತ ಮಾಹಿತಿ ನೀಡಿದರು‌. ಪಾಲ್ಗೊಂಡಾ ತುಳುನಾಡಿನ ಜಿಲ್ಲಾ ರಾಜ್ಯ ದೇಶ ವಿದೇಶದ ತುಳುವರು, ತುಳು ಸಂಘಟನೆಯ ಪದಾಧಿಕಾರಿಗಳು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ತುಳುವೆರೆ ಚಾವಡಿ ಬೆಂಗಳೂರು ಇದರ ಅಧ್ಯಕ್ಷರಾದ ಆಶಾನಂದ ಉಪಸ್ಥಿತರಿದ್ದರು.

 

ರಮೇಶ್ ಶೆಟ್ಟಿಗಾರರು ಸ್ವಾಗತಿಸಿ ಸತೀಶ್ ಅಡ್ಪಲ ಪ್ರಸ್ತಾವಿಕವಾಗಿ ಮಾತನಾಡಿದರು.

 

ಎ.ಎನ್. ಅಡಿಗ ನಿರೂಪಿಸಿ , ಧನ್ಯವಾದ ನೀಡಿದರು.

 

ಆಶಿರ್ವಚನ ನೀಡಿದ ಓಡಿಯೂರು ಶ್ರೀಯವರ ಪರಿಚಯವನ್ನು ಕುಶಾಲಾಕ್ಷಿ ವಿ.ಕಣ್ವತೀರ್ಥ ನಡೆಸಿದರು.

 

ಆರಂಭದಲ್ಲಿ ಕು!ಸನ್ನಿಧಿ ರೈ ಭಾಗವತಿಕೆಯ ಪ್ರಾರ್ಥನೆಯನ್ನು ಹಾಡಿದರೆ ಅದಕ್ಕೆ ಆದಿತ್ಯರ ಮ್ರದಂಗ ಸಾಥ್ ನೀಡಿತು.

ತುಳುವೆರೆ ಚಾವಡಿ ಬೆಂಗಳೂರು ಇದರ ಆಶ್ರಯದಲ್ಲಿ ಜೂನ್ 27 ರಂದು ನಡೆದ Zoom ಕಾರ್ಯಕ್ರಮದಲ್ಲಿ ನಡೆದ ಮಾತುಕತೆ(ಕಜ್ಜ ಕೊಟ್ಯ) ಯಲ್ಲಿ ವಿಶೇಷ ಅನುಭವ ನೀಡಿತು ಟೀಮ್ ತುಳುವೆರೆ ಚಾವಡಿ.

 

*ಉದ್ದೇಶ?*

ತುಳು ಭಾಷೆಯನ್ನು ಉಳಿಸಿ ಬೆಳೆಸುವ ವಿಶೇಷ ಪ್ರಯತ್ನವನ್ನು ತುಳುವರ ಚಾವಡಿ “ಜೋಕುಲೆಗಾದ್ ಪದ ಸಾಹಿತ್ಯ” ಎಂಬ ಹೆಸರಿನ ಮೂಲಕ ಅಂತರ್ಜಾಲ ತಾಣದಲ್ಲಿ ಮುಟ್ಟಿಸುವ ಕೆಲಸ ಕ್ಕೆ ಮುಂದಾಗಿದೆ.

ಇತ್ತೀಚಿನ ದಿನಗಳಲ್ಲಿ ತುಳುವರು ಪಾಶ್ಚಾತ್ಯ ಸಂಸ್ಕೃತಿಗಳಿಗೆ ಮಾರು ಹೋಗುವುದು ಹೆಚ್ಚಾಗಿದೆ.

ಇದು ಉತ್ತಮ ಬೆಳವಣಿಗೆ ಅಲ್ಲ.

ತುಳು ಸಂಸ್ಕೃತಿ ಉಳಿದರೆ ಮಾತ್ರ ಜಿಲ್ಲೆ ರಾಜ್ಯ ಉಳಿದೀತು.ಆಚಾರ ವಿಚಾರಗಳು ಉಳಿಯಬಹುದು. ಅ ನಿಟ್ಟಿನಲ್ಲಿ ನಮ್ಮ ಚಿಕ್ಕ ಪ್ರಯತ್ನ.

ಮುಂದಿನ ದಿನಗಳಲ್ಲಿ ಭಾಷೆಯ ಬಗ್ಗೆ ವಿಶೇಷ ಆಸಕ್ತಿ ಮತ್ತು ಭಾಷೆಯ ಬಗ್ಗೆ ಆಳವಾದ ಜ್ಞಾನ ಉಳಿಯಬೇಕೆಂಬ ನಿಟ್ಟಿನಲ್ಲಿ ಮಕ್ಕಳಿಗೆ ಭಾಷೆಯ ಆಸಕ್ತಿ ನೀಡಲು ಅವಕಾಶ ಈ ಮೂಲಕ ನೀಡುವುದೇ ಮುಖ್ಯ ಉದ್ದೇಶ.

ಇತ್ತೀಚಿನ ವರ್ಷಗಳಲ್ಲಿ ಪ್ರತಿ ಮನೆಯಲ್ಲಿ ಮಕ್ಕಳಿಗೆ ಪಾಶ್ಚಾತ್ಯ ಸಂಸ್ಕೃತಿಗಳನ್ನು ಬಿಂಬಿಸುವ ಮತ್ತು ಓಲೈಕೆ ಮಾಡುವ ಸಂಗೀತ ಮತ್ತು ಪದಗಳನ್ನು ಹಾಡಿ ಮನ ಪರಿವರ್ತನೆ ಮಾಡುವ ಕೆಲಸ ಆಗುತ್ತಿದೆ.

ಈ ಪದ್ದತಿ ಸರಿಯಲ್ಲ ಎಂದು ಮನಗಂಡು ಭಾಷೆಯ ಉಳಿವಿಗಾಗಿ ತುಳುವರ ಸಹಕಾರ ಬೇಕಾಗಿದೆ ಎಂದು ತುಳುವರ ಚಾವಡಿ ತಿಳಿಸಿದೆ.

ಮಕ್ಕಳ ಶಿಶು ಗೀತೆಗಳು ಪುಸ್ತಕ, ಆಡಿಯೋ ವೀಡಿಯೋ ರೂಪದಲ್ಲಿ ಮತ್ತು ಆ್ಯನಿಮೇಷನ್ ರೂಪದಲ್ಲಿ, ಯೂ ಟ್ಯೂಬ್ ಇತರ ಅಂತರ್ಜಾಲದ ಮೂಲಕ ಮಕ್ಕಳಿಗೆ ಹಾಗೂ ಪೋಷಕರಿಗೆ ಮುಟ್ಟಲಿದೆ, ಅದಕ್ಕಾಗಿ ಕೆಲಸ ಸಾಗುತ್ತಿದೆ ಅದಕ್ಕಾಗಿ ತುಳು ಶಿಶು ಸಾಹಿತಿಗಳಿಂದ ಸ್ವರಚಿತ ಅಥವಾ ಸಂಗ್ರಹ ಹಾಡುಗಳನ್ನು ಕಳಿಸಬೇಕಾಗಿ ವಿನಂತಿ. ತುಳುವೆರೆ ಚಾವಡಿ ಬೆಂಗಳೂರು

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...