ಬಂಟ್ವಾಳ: ಸಾಮಾಜಿಕ ಧಾರ್ಮಿಕ ಮುಂದಾಳು ಅರುಣ್ ಕುಮಾರ್ ಶೆಟ್ಟಿ ನುಲಿಯಾಳು ಗುತ್ತು (67ವರ್ಷ ) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ವಿಜಯಾ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಯಾದ ಬಳಿಕ ಸಾಮಾಜಿಕವಾಗಿ ಯೂ ಧಾರ್ಮಿಕವಾಗಿಯೂ ತನ್ನನ್ನು ತಾನು ತೊಡಗಿಸಿಕೊಂಡಿದ್ದರು . ಸುಜೀರು ದತ್ತನಗರ ಶ್ರೀ ಹನುಮಾನ್ ಮಂದಿರದ ಗೌರಾವಾಧ್ಯಕ್ಷರಾಗಿ 20 ವರ್ಷಗಳಿಂದ ಸೇವೆ ಸಲ್ಲಿಸಿ ಕ್ಷೇತ್ರದ ಸರ್ವಾಭಿವೃದ್ದಿಗೆ ಶ್ರಮಿಸಿದ್ದಾರೆ , ಸುಜೀರು ಕೋರ್ದಬ್ಬು ದೈವಸ್ಥಾನವನ್ನು 8 ವರ್ಷಗಳ ಹಿಂದೆ ಪುನರ್ನಿರ್ಮಿಸಿ ಅಲ್ಲಿನ ಆಡಳಿತ ಮೊಕ್ತೇಸರರಾಗಿ ದೈವಸ್ಥಾನದ ಏಳಿಗೆಗೆ ಬಹಳಷ್ಟು ಶ್ರಮಿಸಿದ್ದಾರೆ , ಅಲ್ಲದೆ ಸುಜೀರು ಮಂಗಳಾದೇವಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿಯೂ ಕಳೆದ ಒಂದು ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ . ವಿಶ್ವಹಿಂದೂ ಪರಿಷತ್ ಬಂಟ್ವಾಳ ದ ನಿಕಟ ಪೂರ್ವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ . ಪ್ರತೀ ವರ್ಷ ಸುಜೀರು ಪರಿಸರದ ನೂರಾರು ವಿದ್ಯಾರ್ಥಿಗಳಿಗೆ ಪುಸ್ತಕ ಹಾಗು ಪಾಠೋಪಕರಣಗಳನ್ನು ವಿತರಿಸುತಿದ್ದರು .
ಅನಾರೋಗ್ಯ ದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಅರುಣ್ ಕುಮಾರ್ ಶೆಟ್ಟಿಯವರು ತಮ್ಮ ತುಂಬೆಯ ಸ್ವಗ್ರಹ ದಲ್ಲಿ ಇಂದು ಮುಂಜಾನೆ 4:15 ಕ್ಕೆ ನಿಧನರಾದರು , ಇವರು ಪತ್ನಿ ಇಬ್ಬರು ಗಂಡು ಮಕ್ಕಳು ಸೊಸೆಯಂದಿರು , ಮೊಮ್ಮಕ್ಕಳನ್ನುಅಪಾರ ಅಭಿಮಾನಿಗಳನ್ನು ಅಗಲಿದರು