ಬಂಟ್ವಾಳ: ಮಳೆ ಕಡಿಮೆಯಾದ ಬಳಿಕ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಜುಲೈ 23 ರ ಮಧ್ಯಾಹ್ನ 1 ಗಂಟೆಯ ವೇಳೆಗೆ ನೇತ್ರಾವತಿ ನೀರಿನ6.9 ಆಗಿದೆ.
ಶುಕ್ರವಾರ ಬೆಳಿಗ್ಗೆ ಜೋರಾಗಿ ಮಳೆ ಸುರಿಯುತ್ತಿದ್ದರೂ ಮಧ್ಯಾಹ್ನ ವೇಳೆ ಗೆ ಮಳೆ ಕಡಿಮೆಯಾದರೂ ನೇತ್ರಾವತಿ ನೀರಿನ ಮಟ್ಟದಲ್ಲಿ ಮಾತ್ರ ಏಕಾಏಕಿ ಏರಿಕೆಯಾಗಿದೆ.
ಘಟ್ಟ ಪ್ರದೇಶದಲ್ಲಿ ಅತೀಯಾಗಿ ಮಳೆ ಸುರಿಯುವ ಕಾರಣ ನೇತ್ರಾವತಿ ನದಿಯ ಒಳ ಹರಿವು ಹೆಚ್ಚಾಗಿದೆ. ಪ್ರಸ್ತುತ ನೇತ್ರಾವತಿ ಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೆ ಇದ್ದು, ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದೆ.
ಅಪಾಯದ ಮಟ್ಟ 8.5 ಆಗಿದೆ.
ತಾಲೂಕಿನ ಮಳೆ ಹಾನಿ ಪ್ರಕರಣಗಳು ಬೋಳಂತೂರು ಗ್ರಾಮದ ಬಂಗ್ಲೆಗುಡ್ಡೆ ಎಂಬಲ್ಲಿ ಶಾರದ ಹೈಸ್ಕೂಲ್ ನ ಕಾಂಪೌಂಡ್ ಜರಿದು ಬಿದ್ದಿದೆ.
ಶಂಭೂರು ಗ್ರಾಮದ ಕೆದುಕೊಡಿ ಎಂಬಲ್ಲಿ ರಮೇಶ ಬಿನ್ ಸೇಸಪ್ಪ ಇವರ ಬಚ್ಚಲು ಮನೆಗೆ ಹಾನಿಯಾಗಿದೆ.ಪ್ರಸ್ತುತ ವಾಸದ ಮನೆಯ ಗೋಡೆ ಬಿರುಕು ಬಿಟ್ಟಿದ್ದು ಕುಸಿಯುವ ಹಂತದಲ್ಲಿದ್ದು ತೀವ್ರ ಹಾನಿ ಆಗಿರುತ್ತದೆ ಮನೆಯವರನ್ನು ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ.
ಶಂಭೂರು ಗ್ರಾಮದ ನರ್ಸೆರೆಕೋಡಿ ಎಂಬಲ್ಲಿ ಬಾಬು ಸಫಲ್ಯ ಬಿನ್ ರಾಮಪ್ಪ ಸಫಲ್ಯ ಇವರ ಅಡಿಕೆ ತೋಟಕ್ಕೆ ಹಾನಿ ಆಗಿರುತ್ತದೆ .