ಬಂಟ್ವಾಳ: ಮುಖ್ಯ ಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಿದ ಕೆಲವೇ ಹೊತ್ತಿನಲ್ಲಿ ಮಂಗಳೂರು ಸಂಸದ , ರಾಜ್ಯದ್ಯಕ್ಷ ನಳಿನ್ ಕುಮಾರ್ ಕಟೀಲು ಅವರನ್ನು ಹೈಕಮಾಂಡ್ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ.
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ದ.ಕ.ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು ಅವರ ಹೆಸರು ಸಿ.ಎಂ. ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ಹುಟ್ಟೂರಿನ ದೈವದೇವರ ಆಶೀರ್ವಾದ ಪಡೆದು ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅನೇಕರ ಹೆಸರುಗಳ ಮಧ್ಯೆ ದ.ಕ.ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು ಅವರ ಹೆಸರು ಮುಂಚೂಣಿಯ ಲ್ಲಿದ್ದು ಎಲ್ಲರ ಚಿತ್ತ ದೆಹಲಿಯತ್ತ ಇದೆ.
ಬಿಎಸ್.ವೈ ಅವರ ಪುತ್ರ ವಿಜಯೇಂದ್ರ ಅವರಿಗೆ ರಾಜ್ಯಧ್ಯಕ್ಷ ಸ್ಥಾನ ನೀಡಿ ನಳಿನ್ ಕುಮಾರ್ ಕಟೀಲು ಅವರಿಗೆ ಸಿ.ಎಂ.ಸ್ಥಾನ ನೀಡುವ ಮಾಸ್ಟರ್ ಪ್ಲಾನ್ ಹೈಕಮಾಂಡ್ ಮಾಡಿದೆ ಎನ್ನಲಾಗಿದ್ದು, ಗೃಹ ಸಚಿವ ಅಮಿತ್ ಶಾ ನೇತ್ರತ್ವದಲ್ಲಿ ದೆಹಲಿಯಲ್ಲಿ ಸಭೆ ನಡೆಯುತ್ತಿದೆ ಎನ್ನಲಾಗಿದೆ.
ದ.ಕ.ಜಿಲ್ಲೆಯಲ್ಲಿ ಮೂರನೇ ಬಾರಿ ಸಂಸದರಾಗಿ ಆಯ್ಕೆಯಾಗಿರುವ ನಳಿನ್ ಕುಮಾರ್ ರಾಜ್ಯಧ್ಯಕ್ಷ ನಾಗಿ ಪಕ್ಷದ ಸಂಘಟನೆಯ ಲ್ಲಿ ತೊಡಗಿದ್ದರು.
ಇದೀಗ ಇವರ ಸಂಘಟನಾತ್ಮಕ ಕಾರ್ಯ ವನ್ನು ಮೆಚ್ಚಿ ಸಿ.ಎಂ.ಸ್ಥಾನ ನೀಡುವ ಯೋಚನೆ ಹೈಕಮಾಂಡ್ ಮಾಡಿದ್ದು, ಜೊತೆಗೆ ಹಲವು ಹೆಸರುಗಳು ಇವೆ, ಎಲ್ಲವನ್ನು ಹೈಕಮಾಂಡ್ ನಿರ್ಧಾರ ದ ಮೇಲಿದೆ.