ಬಂಟ್ವಾಳ: ರಾಜ್ಯ ಕಾಂಗ್ರೆಸ್ ಕಾರ್ಮಿಕ ವಿಭಾಗ (ಇಂಟಕ್) ಸಮಿತಿಯ ಉಪಾಧ್ಯಕ್ಷ, ಕರ್ನಾಟಕ ಮುಸ್ಲಿಮ್ ಫೋರಂನ ಸ್ಥಾಪಕ ಅಧ್ಯಕ್ಷ, ಯುವ ಉದ್ಯಮಿ ಡಾ. ಕೆ.ಎಸ್.ಅಮೀರ್ ಅಹ್ಮದ್ ತುಂಬೆ (47) ಅವರ ಸಂತಾಪ ಸಭೆ ಮುಡಿಪು ಬ್ಲಾಕ್ ಕಾಂಗ್ರೇಸ್ ಹಾಗೂ ಮುಡಿಪು ಬ್ಲಾಕ್ ಕಾಂಗ್ರೇಸ್ ಅಲ್ಪಸಂಖ್ಯಾತ ರ ಘಟಕದ ವತಿಯಿಂದ ತುಂಬೆ ಅರಫಾ ಹಾಲ್ ನಲ್ಲಿ ನಡೆಯಿತು.
ಸಂತಾಪ ಸಭೆಗೆ ಆಗಮಿಸಿದ ಮಂಗಳೂರು ಶಾಸಕ ಯು.ಟಿ.ಖಾದರ್ ಮಾತನಾಡಿ, ಎಲ್ಲರ ಜೊತೆಯಲ್ಲಿ ಕಷ್ಟಸುಖದ ಜೊತೆ ಭಾಗಿಯಾಗುವ ಕಾಂಗ್ರೆಸ್ ಕಾರ್ಯಕರ್ತ ಅಮೀರ್ ತುಂಬೆ ಅವರ ಅಕಾಲಿಕ ಮರಣ ಪಕ್ಷಕ್ಕೆ ನಷ್ಟವಾಗಿದೆ ಎಂದು ಅವರು ಹೇಳಿದರು.
ಪರೋಪಕಾರಿಯಗಿ, ಬಡವರ ಸೇವೆ ಮಾಡುವ ಮೂಲಕ ವಿಶೇಷ ವ್ಯಕ್ತಿತ್ವವುಳ್ಳ ರಾಜಕೀಯ ವಾಗಿ ಚತುರನಾಗಿ ಗುರುತಿಸಿಕೊಂಡಿದ್ದರು.
ಪ್ರಮಾಣಿಕವಾಗಿ ಜನಸೇವೆ ಮಾಡಿದರೆ ಜನರು ಸಾವಿನ ಬಳಿಕವೂ ನೆನಪು ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೆ ಅಮೀರ್ ತುಂಬೆ ಅವರ ಸಂತಾಪ ಸಭೆ ಸಾಕ್ಷಿಯಾಗಿದೆ.
ಹುಟ್ಟು ಸಾವಿನ ಮಧ್ಯೆ ಜನರಲ್ಲಿ ನೆನಪು ಇಟ್ಟುಕೊಳ್ಳುವ ರೀತಿಯಲ್ಲಿ ಜೀವನ ಮಾಡುವುದೇ ಸಾಧನೆಯಾಗುತ್ತದೆ ಎಂದು ಅವರು ತಿಳಿಸಿದರು.
ತುಂಬೆ ವಲಯ ಕಾಂಗ್ರೇಸ್ ನ ವತಿಯಿಂದ ಕುಚ್ಚಿಗುಡ್ಡೆ ರಸ್ತೆಗೆ ದಿ! ಅಮೀರ್ ತುಂಬೆ ಅವರ ಹೆಸರನ್ನು ನಾಮಕರಣ ಮಾಡುವ ಮೂಲಕ ಅಮೀರ್ ತುಂಬೆ ಅವರ ನೆನಪು ಸದಾ ನಮ್ಮ ಜೊತೆಗೆ ಇರುವಂತೆ ಮಾಡಬೇಕು ಎಂದು ಅವರು ತಿಳಿಸಿದರು.
ಸಂತಾಪ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ
ಎಲ್ಲಾ ಜಾತಿ ಧರ್ಮದವರೊಂದಿಗೆ ಅನನ್ಯತೆಯಿಂದ ಇದ್ದ ಅಮೀರ್ ಅವರು ಕೊಡುಗೈ ದಾನಿಯೂ ಆಗಿದ್ದ ಅಮೀರ್ ತುಂಬೆ ಅವರ ಅಕಾಲಿಕ ಮರಣ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದರು.
ರಾಜಕೀಯ, ಸಾಮಾಜಿಕದ ಜೊತೆಗೆ ಧಾರ್ಮಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿದ್ದ ಅವರು ಜಿಲ್ಲಾ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದರು. ಕೊರೋನ ಅಲೆಯಿಂದ ಸಂಕಷ್ಟಕ್ಕೆ ಒಳಗಾದ ಬಡ ಕುಟುಂಬಗಳಿಗೆ ತಂಡವನ್ನು ರಚಿಸಿ ನಿರಂತರ ಆಹಾರ ಸಾಮಗ್ರಿಗಳನ್ನು ಒದಗಿಸುವ ಮೂಲಕ ನೆರವಾಗಿರುವ ಓರ್ವ ಶ್ರಮ ಜೀವಿ ಎಂದರು.
ಮುಡಿಪು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಶಾಂತ್ ಕಾಜವ ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿದ್ದರು.
ಮುಡಿಪು ಬ್ಲಾಕ್ ಕಾಂಗ್ರೇಸ್ ಘಟಕದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ತಿಯಾಜ್ ತುಂಬೆ ಕಾರ್ಯ ಕ್ರಮ ಸಂಘಟಿಸಿದ್ದರು.
ಇಮ್ತಿಯಾಜ್ ತುಂಬೆ ಅರಫಾ ಗ್ರೂಪ್ ತುಂಬೆ ಇದರ ನಿರ್ದೇಶಕ ಕೆ.ಸಾವುಞಿ ಹಾಜಿ ಅವರ ಪುತ್ರರಾದ ಅಮೀರ್ ತುಂಬೆ ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು.
ಮುಸ್ಲಿಮ್ ಸಮುದಾಯದ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಕರ್ನಾಟಕ ಮುಸ್ಲಿಮ್ ಫೋರಂ ಸಂಘಟನೆಯನ್ನು ಹುಟ್ಟು ಹಾಕಿದ್ದರು.
ರಾಜಕೀಯ ಕ್ಷೇತ್ರದಲ್ಲಿ ಅಮೀರ್ ತುಂಬೆ ಮಾಡುತ್ತಿದ್ದ ಸಮಾಜ ಸೇವೆಯನ್ನು ಗುರುತಿಸಿ 2016ರಲ್ಲಿ ಇಂಟರ್ ನ್ಯಾಷನಲ್ ತಮಿಳ್ ಯುನಿವರ್ಸಿಟಿಯಿಂದ ಅವರಿಗೆ ಗೌರವ ಡಾಕ್ಟರೇಟ್ ಪದವಿ ಲಭಿಸಿತ್ತು.
ಸಂತಾಪ ಸಭೆಯಲ್ಲಿ ,ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಜಿ.ಪಂ.ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಮತಾ ಗಟ್ಟಿ , ತಾ.ಪಂ.ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಉಪಾಧ್ಯಕ್ಷ ಅಬ್ಬಾಸ್ ಆಲಿ,
ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಾಹುಲ್ ಹಮೀದ್, ಜಿ.ಪಂ.ಮಾಜಿ ಸದಸ್ಯ ಫಾರೂಕ್ ಪರಂಗಿಪೇಟೆ ವೃಂದ ಪೂಜಾರಿ,ಮಹಮ್ಮದ್ ಮೋನು, ,ಪ್ರವೀಣ್ ಆಳ್ವ, ರಝಾಕ್ ಕುಕ್ಕಾಜೆ, ಜಲೀಲ್, ನಾಸೀರ್, ನವಾಜ್, ಸಿದ್ದೀಕ್ ಪಾರೆ ಜಗದೀಶ್ ಗಟ್ಟಿ, ಗಣೇಶ್ ಸಾಲಿಯಾನ್ , ರಶೀದ್ ತುಂಬೆ, ಮೋನಪ್ಪ ಮಜಿ, ದೇವದಾಸ್ ಪರ್ಲಕ್ಯ, ಗೋಪಾಲಕೃಷ್ಣ, ಪ್ರಕಾಶ್ ಶೆಟ್ಟಿ ಶ್ರೀಶೈಲ, ಹೈದರ್ ಕೈರಂಗಳ, ರಫೀಕ್ ಪೆರಿಮಾರ್, ಟಿ.ಕೆ.ಶರೀಫ್, ಅರುಣ್ ಡಿಸೋಜ, ನಿಸಾರ್ ವಳವೂರು, ರಫೀಕ್, ಸದಾಶಿವ ಡಿ.ತುಂಬೆ, ಮತ್ತಿತರರು ಉಪಸ್ಥಿತರಿದ್ದರು.