ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಹಸಿಕಸ ಬಂಟ್ವಾಳ ಶಾಸಕರ ತೋಟದಲ್ಲಿ ಡಂಪ್ ಮಾಡಲಾಗುತ್ತಿದೆ.
ಕಳೆದ 5 ತಿಂಗಳುಗಳಿಂದ ದಿನಂಪ್ರತಿ ಸದ್ದಿಲ್ಲದೇ 1 ಲೋಡು ಹಸಿ ಕಸ ಒಡ್ಡೂರು ಫಾರ್ಮ್ ಗೆ ಸೇರುತ್ತಿದೆ.
ಹಸಿ ಕಸ ವಿಲೇವಾರಿ ವಿಲೇವಾರಿ ಸಮಸ್ಯೆಗೆ ಬಂಟ್ವಾಳ ಶಾಸಕರು ಈ ನಿರ್ಧಾರ ತೆಗೆದುಕೊಳ್ಳುವ ಮೂಲಕ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಸ ವಿಲೇವಾರಿ ಗೆ ತಾತ್ಕಾಲಿಕ ಪರಿಹಾರ ನೀಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕಂಚಿನಡ್ಕ ಡಂಪಿಂಗ್ ಯಾರ್ಡ್ ನಲ್ಲಿ ಕಸ ವಿಲೇವಾರಿ ಗೆ ಸಂಬಂಧಿಸಿದಂತೆ ವಿವಾದ ಗಳು ನಡೆಯುತ್ತಿದೆ. ಇತ್ತೀಚಿಗೆ ಶಾಸಕರ ಪ್ರಯತ್ನ ದಿಂದ ಒಣ ಕಸವನ್ನು ಮಾತ್ರ ಕಂಚಿನಡ್ಕ ಪದವಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿತ್ತು.
ಆದರೆ ಹಸಿ ಕಸವನ್ನು ಮಂಗಳೂರು ಮಹಾನಗರ ಪಾಲಿಕೆಗೆ ಕಳುಹಿಸಿಲಾಗುತ್ತಿದ್ದರೂ ಇತ್ತೀಚಿನ ದಿನಗಳಲ್ಲಿ ಅಲ್ಲೂ ವಿರೋಧ ಬಂದ ಹಿನ್ನೆಲೆಯಲ್ಲಿ ಪುರಸಭೆ ಗೆ ಬಹುದೊಡ್ಡ ತಲೆನೋವಾಗಿತ್ತು.
ಬಂಟ್ವಾಳ ಪುರಸಭಾ ವ್ಯಾಪ್ತಿಯ
ಕಳೆದ ಹಲವಾರು ವರ್ಷ ಗಳಿಂದ ಜ್ವಲಂತ ಸಮಸ್ಯೆಯಾಗಿದ್ದ ಪುರಸಭೆಯ ತ್ಯಾಜ್ಯ ಸಮಸ್ಯೆಗೆ ಬಂಟ್ವಾಳ ಶಾಸಕರು ತಾತ್ಕಾಲಿಕ ಮುಕ್ತಿ ದೊರಕಿಸಿದ್ದಾರೆ.
ಪುರಸಭಾ ವ್ಯಾಪ್ತಿಯ ಹಸಿಕಸ ವಿಲೇವಾರಿಗೆ ತನ್ನ ಖಾಸಗಿ ಭೂಮಿ ಒಡ್ಡೂರು ಫಾರ್ಮ್ಸ್ ನಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ.
ತನ್ನ ಮನೆಯ ಕಸವನ್ನು ಪಕ್ಕದ ಮನೆಯವರ ಕಂಪೌಂಡಿಗೆ ಎಸೆಯಲು ಹವಣಿಸುವ ಪ್ರವೃತ್ತಿಯ ಈ ಕಾಲದಲ್ಲಿ ಖಾಸಗಿ ಜಮೀನಿನಲ್ಲಿ ತ್ಯಾಜ್ಯ
ವಿಲೇವಾರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.