ಬಂಟ್ವಾಳ: ಔಷಧಿ ತರಲು ಪೇಟೆಗೆ ಬಂದ ವೃದ್ದೆಯೋರ್ವರು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ಶಾಂತಿ ಪಲ್ಕೆ ನಿವಾಸಿ ವೆಂಕಮ್ಮ ಮೂಲ್ಯ (65) ಅವರು ಕಾಣೆಯಾದ ವೃದ್ದೆ.
ಅವರು ಜುಲೈ 9 ರಂದು ಬೆಳಿಗ್ಗೆ ಔಷಧಿ ತರಲು ಮೆಲ್ಕಾರ್ ಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಬಂದವರು ವಾಪಸು ಮನೆಗೆ ಬಂದಿಲ್ಲ ಎಂದು ಮನೆಯವರು ದೂರು ನೀಡಿದ್ದಾರೆ.
ಇವರ ಮಾಹಿತಿ ಸಿಕ್ಕಿದಲ್ಲಿ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ತಿಳಿಸುವುಂತೆ ಪೋಲೀಸರು ತಿಳಿಸಿದ್ದಾರೆ