ಬಂಟ್ವಾಳ: ಶಾಸಕ ಯು.ಟಿ.ಖಾದರ್ ಅವರು ಮೆಲ್ಕಾರ್ ಎ.ಆರ್.ಟಿ.ಒ.ಕಚೇರಿ ಗೆ ದಿಡೀರ್ ಬೇಟಿ ನೀಡಿ ಗಮನ ಸೆಳೆದರು.
ಅನಿರೀಕ್ಷಿತ ಶಾಸಕರ ಬೇಟಿ ಎ.ಆರ್.ಟಿ.ಒ.ಕಚೇರಿಯ ಅಧಿಕಾರಿಗಳಿಗೆ ಶಾಕ್ ನೀಡಿತ್ತು.
ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರು ಬಂಟ್ವಾಳ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ(ಎಆರ್.ಟಿಒ)ಯವರ ಕಚೇರಿಗೆ ಭೇಟಿ ನೀಡಿ ಸಾರಿಗೆ ಇಲಾಖೆಯ ಸಮಸ್ಯೆಗಳ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ಸಾರ್ವಜನಿಕರ ಭೇಟಿ ಹಾಗೂ ಇನ್ನಿತರ ವಿಚಾರಗಳ ಕುರಿತು ಮಾತುಕತೆ ನಡೆಸಿದರು.
ಬಂಟ್ವಾಳ ಎಆರ್.ಟಿಒ ಜಾನ್ ಮಿಸ್ಕಿತ್ ಅವರು ಕಚೇರಿಯ ಸೇವೆಗಳ ಕುರಿತು ಶಾಸಕರಿಗೆ ಮಾಹಿತಿ ನೀಡಿದರು.
ಈ ವೇಳೆ ಶಾಸಕರು ತಮ್ಮ ಚಾಲನಾ ಪರವಾನಿಗೆ(ಡಿಎಲ್) ರಿನೀವಲ್ ಮಾಡಿಸಿಕೊಂಡರು. ಇರಾ ಗ್ರಾ.ಪಂ.ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಕುರ್ನಾಡು ಗ್ರಾ.ಪಂ. ಮಾಜಿ ಅಧ್ಯಕ್ಷ ಝುಬೈರ್ ಕೋಟೆಕಣಿ ಉಪಸ್ಥಿತರಿದ್ದರು.