ಬಂಟ್ವಾಳ: ಕಳ್ಳಿಗೆ ಗ್ರಾಮದ ಕಾರ್ತಿಕ್ ಪೂಜಾರಿ ಯವರು ರೈಲ್ವೇ ಹಳಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಸಾವಿನ ತನಿಖೆ ನಡೆಸುವಂತೆ ವಿಶ್ವ ಹಿಂದೈ ಪರಿಷದ್ ನ ಬಂಟ್ವಾಳಪ್ರಖಂಡ ಪೊಲೀಸ್ ಇಲಾಖೆಯನ್ನು ಒತ್ರಾಯಿಸಿದೆ. ಕಳೆದ ಜು.26 ರಂದು ದೇಮುಂಡೆ ಎಂಬಲ್ಲಿ ಶರೀಫ್, ಸೋಹೆಲ್ ಹಾಗೂ ನಾಸಿರ್ ಎಂಬವರು ಕಾರ್ತಿಕ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದರು, ಈ ಕುರಿತಂತೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿತ್ತು. ಈ ದೂರು ವಾಪಾಸು ಪಡೆಯುವಂತೆ ಒತ್ತಡ ಹೇರಲಾಗಿದ್ದು, ಇದೀಗ ಕಾರ್ತಿಕ್ ಅನುಮಾನ ಆಸ್ಪದ ವಾಗಿ ಸಾವನ್ನಪ್ಪಿದ್ದಾರೆ. ಮೃತ ಯುವಕ ಸಂಘಟನೆಯ ಸಕ್ರೀಯ ಕಾರ್ಯಕರ್ತನಾಗಿದ್ದು, ಈತನ ಸಾವಿನ ಕುರಿತಾಗಿ ಸೂಕ್ತ ತನಿಖೆ ನಡೆಸುವಂತೆ . ಬಂಟ್ವಾಳನಗರ ಪೊಲೀಸರಿಗೆ ಮನವಿ ನೀಡಿರುವ ಮನವಿಯಲ್ಲಿ ಹೇಳಲಾಗಿದೆ.