Saturday, April 6, 2024

ಗುಡ್ಡ ಕುಸಿದು ಕೃಷಿಗೆ ಹಾನಿ, ಮನೆಯವರನ್ನು ಸ್ಥಳಾಂತರ , ಬಂಟ್ಚಾಳದಲ್ಲಿ ಮಳೆಗೆ ಲಕ್ಷಾಂತರ ನಷ್ಟ

ಬಂಟ್ವಾಳ : ಎಡೆಬಿಡದೆ ಸುರಿಯುತ್ತಿರುವ ಮಳೆಗೆ ತಾಲೂಕಿನಲ್ಲಿ ಅನೇಕ ಹಾನಿ ಯಾಗಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.

ಗಾಳಿ ಮಳೆಗೆ ಮನೆ, ಗುಡ್ಡಕುಸಿತ, ಶಾಲಾ ಕಾಂಪೌಂಡ್ ಗೋಡೆ ಕುಸಿತ ಸೇರಿದಂತೆ ಹಲವೆಡೆ ‌ಕೃಷಿಗೆ ಹಾನಿಯಾಗಿದೆ.

ಸಜೀಪ ಮೂಡ ಗ್ರಾಮದ ನಗ್ರಿ ಕೂಸಪ್ಪ ನಾಯ್ಕ್ ಇವರ ಮನೆ ಸಮೀಪದಲ್ಲಿ ಗುಡ್ಡ ಕುಸಿತ ದಿಂದಾಗಿ ಅಡಿಕೆ ಹಾಗೂ ತೆಂಗು ಕೃಷಿಗೆ ಹಾನಿಯಾಗಿದೆ.

ಸುಮಾರು 100 ಅಡಿಕೆಮರ ಹಾಗು 15 ತಿಂಗಿನ ಮರ ಮಣ್ಣು ಪಾಲು ಆಗಿದೆ.

ಸುರಕ್ಷಿತ ದೃಷ್ಟಿಯಿಂದ ಈಗಾಗಲೇ ಮನೆಯವರನ್ನು ಸ್ಥಳಾಂತರಿಸಲಾಗಿದೆ.

ಬೋಳಂತೂರು ಗ್ರಾಮದ ಕೊಕ್ಕಪುಣಿ ಎಂಬಲ್ಲಿ ನೇಮಕ್ಕು ರವರ ವಾಸದ ಮನೆಯ ಹಿಂಬದಿಯಲ್ಲಿ ಜರಿದು ಬಿದ್ದಿರುತ್ತದೆ , ಅಬ್ದುಲ್ ಖಾದ್ರಿ ರವರ ಮನೆಯ ಕಾಂಪೌಂಡ್ ಕುಸಿದು ಬಿದ್ದಿರುತ್ತದೆ ಹಾಗೂ ಗುಂಡಿಮಜಲು ಎಂಬಲ್ಲಿ ಚೆನ್ನಪ್ಪ ಪೂಜಾರಿ ರವರ ಮನೆಯ ಹಿಂಬಾಗದ ತೊಡಿನ ತಡೆಗೋಡೆ ಕುಸಿದು ಬಿದ್ದಿರುತ್ತದೆ .

ಬಂಟ್ವಾಳ ಕಸಬಾ ಗ್ರಾಮ ದ ಮಣಿ ಎಂಬಲ್ಲಿ ಬಾಲ ಕೃಷ್ಣ ಗೌಡ ಬಿನ್ ಸಂಜೀವ ಗೌಡ ಆವರಣ ಗೋಡೆ ಕುಸದಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಬಂಟ್ವಾಳ ಕಸಬಾ ಗ್ರಾಮದ ಮುಗ್ದಲ್ ಗುಡ್ಡೆ ಎಂಬಲ್ಲಿ ಶಕುಂತಲಾ ರವರ ಮನೆ ಕುಸಿದು ಪೂರ್ಣ ಹಾನಿ ಆಗಿರುತ್ತದೆ.

ಕೊಳ್ನಾಡು ಗ್ರಾಮದ ಸೆರ್ಕಳ ಎಂಬಲ್ಲಿ ರಾಜೀವಿ ಶೆಟ್ಟಿ ಎಂಬುವವರ ವಾಸ್ತವ್ಯದ ಮನೆಯ ಹಿಂಬದಿ ಧರೆ ಕುಸಿದು ಮನೆಗೆ ಸಣ್ಣ ಪ್ರಮಾಣದ ಹಾನಿಯಾಗಿರುತ್ತದೆ. ಸ್ಥಳೀಯರ ಸಹಾಯದಿಂದ ಕುಸಿದ ಮಣ್ಣು ತೆರವು ಕಾರ್ಯ ಮಾಡಲಾಗಿರುತ್ತದೆ.

ವಿಟ್ಲ ಪಡ್ನೂರು ಗ್ರಾಮದ ಕೊಡಂಗೆ ಎಂಬಲ್ಲಿ ಶ್ರೀ ಸುನಿಲ್ ಪಾಯ್ಸ್ ಬಿನ್ ಥಾಮಸ್ ಪಾಯ್ಸ್ ಎಂಬವರ ಮನೆಯ ಸಮೀಪದ ಗುಡ್ಡ ಕುಸಿದು ಅಡಿಕೆ ಕೃಷಿ ಹಾನಿಯಾಗಿರುತ್ತದೆ. ಮನೆಗೆ ಯಾವುದೇ ಹಾನಿ ಸಂಭವಿಸಿರುವುದಿಲ್ಲ.

ಅರಳ ಗ್ರಾಮದ ಕುಟ್ಟಿಕಲ ಎಂಬಲ್ಲಿ ಮೋನಮ್ಮ ಎಂಬವರ ವಾಸದ ಮನೆ ಬಾಗಶ: ಹಾನಿಯಾಗಿದೆ.

ಮೊಡಂಕಾಪು ದೀಪಿಕಾ ಪ್ರೌಡ ಶಾಲೆ ಯ ಅವರಣ ಗೊಡೆ ಜರಿದು ಬಿದ್ದ ಘಟನೆ ನಡೆದಿದೆ.

More from the blog

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...

ಪ್ರಧಾನಿ ಮೋದಿ ಕರೆ : ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ" ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ...

ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ : ಕಡಬ, ಅಜೆಕಾರಿನಲ್ಲಿ ದಾಖಲೆಯ ಉಷ್ಣಾಂಶ

ಮಂಗಳೂರು: ಮುಂದಿನ ಎರಡು ದಿನಗಳ ಕಾಲ ಬಿಸಿಲಿನ ಶಾಕ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಕರಾವಳಿ ಭಾಗದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಎ. 4ರಿಂದ 5ರ...

ಮತದಾನ ಜಾಗೃತಿ ಅಂಗವಾಗಿ ಸೆಲ್ಫಿ, ಸಹಿ ಅಭಿಯಾನಕ್ಕೆ ಚಾಲನೆ

ಮತದಾರರರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಬಂಟ್ವಾಳ ತಾಲೂಕು ಪಂಚಾಯತ್, ತಾಲೂಕು ಆಡಳಿತ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಎ‌.5ರಂದು ಸೆಲ್ಫಿ, ಸಹಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ...