ಬಂಟ್ವಾಳ: ಮಳೆ ಕೊಂಚ ಕಡಿಮೆಯಾದರೂ ಮಳೆಗೆ ಹಾನಿಯ ತೀವ್ರ ತೆ ಕಡಮೆ ಯಾಗಿಲ್ಲ.
ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಬೊಗ್ಗಂಡ ಮನೆ ಎಂಬಲ್ಲಿ ವಿಶ್ವನಾಥ ಪೂಜಾರಿ ಎಂಬುವರ ವಾಸದ ಕಚ್ಚಾ ಮನೆಯು ಭಾರಿ ಗಾಳಿ ಮಳೆಗೆ ತೀವ್ರ ಹಾನಿಯಾಗಿದ್ದು ಸಂಪೂರ್ಣ ಬೀಳುವ ಸಂಭವವಿರುತ್ತದೆ ಹಾಗೂ ಮನೆಯಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಅನಂತಾಡಿ ಗ್ರಾಮದ ಬೊಗ್ಗಂಡ ಮನೆ ಎಂಬಲ್ಲಿ ಲೀಲಾ ಕೇಶವ ಪೂಜಾರಿ ಎಂಬುವರ ಕಚ್ಚಾ ವಾಸದ ಮನೆಯು ಹಾಗೂ ಮನೆಗೆ ತಾಗಿದ್ದ ದನದ ಕೊಟ್ಟಿಗೆಯು ಗಾಳಿ ಮಳೆಗೆ ಭಾಗಶಃ ಹಾನಿಯಾಗಿರುತ್ತದೆ.
ಅನಂತಾಡಿ ಗ್ರಾಮದ ಮಠದ ಮೂಲೆ ಎಂಬಲ್ಲಿ ಕಾಂತಪ್ಪ ಗೌಡ ಎಂಬುವರ ಭತ್ತದ ಗದ್ದೆಗೆ (ಕೃಷಿ ಜಮೀನಿಗೆ) ಮಳೆ ನೀರು ಹರಿದು ಕೃಷಿ ನಷ್ಟವಾಗಿರುತ್ತದೆ.