ಬಂಟ್ವಾಳ: ಬಂಟ್ವಾಳ ತಾ. ಕಾವಳಪಡೂರು ಗ್ರಾಮದ ಮಧ್ವದ ಮಧ್ವ ಯಕ್ಷಕೂಟ ವತಿಯಿಂದ ಮಧ್ವಪ್ಯಾಲೇಸ್ ಸಭಾಂಗಣದಲ್ಲಿ ಶನಿವಾರ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
ಜ್ಯೋತಿಷ ವಿದ್ವಾನ್ ವೆಂಕಟರಮಣ ಮುಚ್ಚಿನ್ನಾಯ ಕಾರಿಂಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯಕ್ಷಗಾನದ ಮೂಲಕ ಧರ್ಮಶಾಸ್ತ್ರ, ರಾಮಾಯಣ, ಮಹಾಭಾರತ ಮೊದಲಾದ ಪುರಾಣ ಗ್ರಂಥಗಳ ಕಥೆಗಳ ಪ್ರಚಾರ ಕಾರ್ಯ ನಡೆಯುತ್ತಿದ್ದು, ಯಕ್ಷಗಾನಕ್ಕೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಶ್ರೀ ಮಧ್ವಾಚಾರ್ಯರು ನಡೆದಾಡಿದ ಮಧ್ವದಲ್ಲಿ ಮತ್ತು ಶ್ರೀ ಪೇಜಾವರ ಶ್ರೀಗಳಿಂದ ಉದ್ಘಾಟಿಸಲ್ಪಟ್ಟು ಯಕ್ಷಗಾನಕ್ಕೆ ನಿರಂತರ ಪ್ರೋತ್ಸಾಹ ನೀಡುವ ಮಧ್ವ ಯಕ್ಷ ಕೂಟದ ಕಾರ್ಯ ಅಭಿನಂದನೀಯ ಎಂದರು.
ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಗ್ರಾ.ಪಂ.ಸದಸ್ಯೆ ಭವಾನಿ ಶ್ರೀಧರ ಪೂಜಾರಿ, ಬಂಟರ ಸಂಘ ಕಾವಳಮೂಡೂರು ವಲಯದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಹಿರಿಯ ಯಕ್ಷಗಾನ ಕಲಾವಿದರಾದ ದಿನೇಶ್ ಶೆಟ್ಟಿ ಕಾವಳಕಟ್ಟೆ, ಸಂಜೀವ ಕುಲಾಲ್ ಅನುಗ್ರಹ ಪಾರೆಂಕಿ, ತಿಮ್ಮಪ್ಪ ಶೆಟ್ಟಿ ಪಾತಿಲ,ಯಕ್ಷ ಕೂಟ ಸಮಿತಿ ಪದಾಽಕಾರಿಗಳಾದ ಸಂಜೀವ ಶೆಟ್ಟಿ ಪಂಜಿಕಲ್ಲು, ಶಿವಪ್ಪ ಗೌಡ ನಿನ್ನಿಕಲ್ಲು, ಗೋಪಾಲಕೃಷ್ಣ ಬಂಗೇರ, ಗಣನಾಥ ಶೆಟ್ಟಿ, ನಾರಾಯಣ ಶೆಟ್ಟಿ, ರಾಜ್ ಪ್ರಸಾದ್ ಆರಿಗ, ಬೇಬಿ ಕುಂದರ್, ರಮೇಶ್ ನಾಯ್ಕ, ಭಾನುಮತಿ ಶೆಟ್ಟಿ,ಸುಜಾತಾ ಬಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷ ಕೂಟ ಅಧ್ಯಕ್ಷ ಭಾಸ್ಕರ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಪತ್ರಕರ್ತ ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ನಡೆಯಿತು.