ಬಂಟ್ವಾಳ ತಾಲೂಕಿನ ಮಾಣಿ ಗ್ರಾಮ ಎಂದರೆ ತಾಲೂಕಿನಲ್ಲೇ ಕೋಮು ಸೌಹಾರ್ದ ದ ಊರು.
ಇಲ್ಲಿ ಅವರ ಧರ್ಮ ವನ್ನು ಪ್ರೀತಿಸಿ ಗೌರವಿಸುವ ಮೂಲಕ,ಇತರ ಧರ್ಮ ದ ಜನರೊಂದಿಗೆ ಸ್ನೇಹಯುತವಾಗಿ ಇರುವ ಕಲಾಪ್ರೇಮಿ, ಯಕ್ಷಗಾನ ಪ್ರೇಮಿ ಒಬ್ಬರ ಬಗ್ಗೆ ಬರೆಯಬೇಕೆನಿಸಿತು.
ಮಾಣಿಯಲ್ಲಿ ಹಮೀದ್ ಎಂದರೆ ಯಾರು ಅಂತ ಕೇಳಿದ್ರೆ ಕೆಲವು ಮಂದಿ ಇರಬಹುದು. ಆದರೆ ಯಕ್ಷಗಾನ ಪ್ರೇಮಿ ,ಆಟ ನೋಡುವ ಹಮೀದ್ ಇದ್ದರೆ ಅದು ಪಲ್ಕೆಹಮೀದ್ ಮಾತ್ರ.ಇವರೊಬ್ಬ ಅಪ್ಪಟ ಯಕ್ಷಗಾನ ಪ್ರೇಮಿ .ಜವ್ವನಿಕೆಯಲ್ಲಿ ಉತ್ತಮ
ಕಬಡ್ದಿ ಆಟಗಾರ, ಕ್ರೀಡಾ ಪ್ರೇಮಿಯೂ ಹೌದು.ಇವರನ್ನ ಕಬಡ್ಡಿ ಹಮೀದ್ ಅಂತಲೂ ಜನ ಹೇಳುತ್ತಿದ್ದರು.
ಕೆಲವು ವರ್ಷಗಳ ಹಿಂದೆ ಕಬಡ್ಡಿ ಟೂರ್ನಮೆಂಟ್ ನಡೆಸುವ ಮೂಲಕ ಮತ್ತು ಕಬಡ್ಡಿ ಟೂರ್ನಿಯ ಬಹುಮಾನದ ಪ್ರಾಯೋಜಕರಾಗಿ ಉತ್ತಮ ಕ್ರೀಡಾ ಪೋಷಕರು ಒಂದು ನಿಟ್ಟಿನಲ್ಲಿ ಹೌದು.
ಇವರು ಮಾಣಿ ಸುತ್ತಮುತ್ತಲಿನ ಪ್ರದೇಶದಲ್ಲಿ
ಯಾವುದೇ ಯಕ್ಷಗಾನ ಕಾರ್ಯಕ್ರಮ ಇದ್ದರೆ ಇವರು ಖಾಯಂ ಅಭಿಮಾನಿ. ತುಳು,ಕನ್ನಡ,ಚಾರಿತ್ರಿಕ ಪೌರಾಣಿಕ ಯಾವುದು ಆಗುತ್ತದೆ. ಆಟ ನೋಡಿದ್ರೆ ಸಾಕು ಇವರದ್ದು ಅಂತಹ ಯಕ್ಷಗಾನ ಪ್ರೇಮ.
ಮಾಣಿ ಮತ್ತು ಸುತ್ತಮುತ್ತಲಿನ ಊರುಗಳಲ್ಲಿ, ಕೆಲವು ದಶಕದ ಹಿಂದೆ ಉಡುಪಿ ಜಿಲ್ಲೆಯ ವರೆಗೆ ಹೋಗಿ ಆಟ ನೋಡಿ ಬರುವ ಕಾರಣ ಇವರನ್ನು “ಆಟದ ಅಭಿಮಾನಿ ಹಮೀದ್” ಎಂದೇ ಎಲ್ಲರೂ ಗುರುತಿಸುತ್ತಾರೆ.
ಹಮೀದ್ ರಿಗೆ ರವರು ಮುಸ್ಲಿಂ ಆಗಿ ಯಕ್ಷಗಾನ ಪ್ರೇಮ ಹೇಗೆ ಹುಟ್ಟಿತು ಎಂದರೆ ಹಮೀದ್ ಚಿಕ್ಕವರಿರುವಾಗ
ಕೆಲವು ದಶಕದ ಹಿಂದೆ ಮಾಣಿಯಲ್ಲಿ ವಿವಿಧ ಯಕ್ಷಗಾನ ಮೇಳಗಳ ಆಟ ಆಗುತ್ತಿತ್ತು.ವಿವಿಧ ಟೆಂಟ್ ಮೇಳದ ಕಲಾವಿದರು ಬರಣಿಕೆರೆ ಕೆರೆಗೆ ಸ್ನಾನ ಮಾಡಲು ಬರುತ್ತಿದ್ದರು.ಇದು ಮಾಣಿಯ ಪಲ್ಕೆ ಸಮೀಪದ ಜಾಗ.ಹಮೀದ್ ಮನೆ ಹತ್ತಿರ.
ಅಲ್ಲೇ ಸಮೀಪದಲ್ಲಿ ಯಕ್ಷಗಾನ ದೊಡ್ಡ ಅಭಿಮಾನಿ ದಿ| ರಾಮಚಂದ್ರ ಆಚಾರ್ ಮನೆ.ಅದು ಯಕ್ಷಗಾನ ಕಲಾವಿದರಿಗೆ ತವರು ಮನೆ ಇದ್ದ ಹಾಗೆ.ರಾಮಚಂದ್ರ ಆಚಾರ್ ರಿಗೆ ಹೆಚ್ಚಿನ ಯಕ್ಷಗಾನ ಕಲಾವಿದರ ಒಡನಾಟ ಇತ್ತು. ಹಿಂದೆ ಟೆಂಟ್ ಮೇಳದ ಆಟದ ಇಚ್ಚರ್ ಗೆ ಕೋಲ್ ಹಾಕುತ್ತಿದ್ದ ಹುಡುಗರಿಗೆ ಉಚಿತವಾಗಿ ನೆಲದಲ್ಲಿ ಆಟ ನೋಡುವ ಅವಕಾಶ ಸಿಕ್ಕುತ್ತಿತ್ತು.ಆಕಾಲದ ಮಾಣಿಯ ಕೆಲವು ಹುಡುಗರ ಜೊತೆಯಲ್ಲಿ ಹಮೀದ್ ಕೂಡ ಹೋಗುತ್ತಿದ್ದರು.ಕೇವಲ ಆಟ ನೋಡುವ ಉದ್ದೇಶದಿಂದ ಮಾತ್ರ.ಅದು ಕೂಡ ಅವರ ಸಮುದಾಯದವರ ಕಣ್ಣು ತಪ್ಪಿಸಿ.ಅವರ ಮೇಲೆ ಹೆದರಿಕೆಯಿಂದ ಅಲ್ಲ.ಬದಲಾಗಿ ಅವರು ಏನು ತಿಳ್ಕೊತಾರೋ ಎಂಬ ನಾಚಿಕೆಯಿಂದ.
ಮಾಣಿಯಲ್ಲಿ ಆಟ ಇರುವ ದಿನ
ಕಲಾವಿದರ ಜೊತೆಯಲ್ಲಿ ಇರುತ್ತಿದ್ದ ಹಮೀದ್ ರವರು ತಾನು ಹಗಲಲ್ಲಿ ನೋಡಿದ ಕಲಾವಿದ ನ ವೇಷ ಹೇಗಿರುತ್ತದೆ ಎಂಬ ಕುತೂಹಲ ಹಮೀದ್ ರ ಯಕ್ಷಗಾನ ಪ್ರೇಮ ಇಮ್ಮಡಿ ಅಲ್ಲ ನಾಲ್ಕು ಪಟ್ಟು ಹೆಚ್ಚಿಸಿತ್ತು.
1969 ರಲ್ಲಿ ಮಾಣಿಯಲ್ಲಿ ಯಕ್ಷಗಾನ ಅಭಿಮಾನಿ ಯುವಕರೆಲ್ಲ ಸೇರಿ ಶ್ರೀ ಉಳ್ಳಾಲ್ತಿ ಯಕ್ಷಗಾನ ಕಲಾ ಸಂಘ ಅಂತ ಶುರು ಮಾಡುತ್ತಾರೆ. ಅಷ್ಟೇಮಿಗೆ ಪ್ರತೀ ವರ್ಷ ಶ್ರೀ ಕೃಷ್ಣಲೀಲೆ ಕಂಸ ವದೆ ಪ್ರತಿವರ್ಷ ಆಟ ಆಗುವುದು. ಈ ಯುವಕ ಸಂಘ ಸುಮಾರು 14ವರ್ಷಗಳ ಕಾಲ ಮಾಣಿ ಪರಿಸರದಲ್ಲಿ ಯಕ್ಷಗಾನದ ಕಲಾ ಸೇವೆ ಮಾಡುತ್ತದೆ.
ಕಲಾವಿದರು ಬೇರೆಯಾರೂ ಅಲ್ಲ.ಊರಿನ ಯುವ ಉತ್ಸಾಹಿ ತರುಣರು.ಇದರಲ್ಲಿ ಹಮೀದ್ ಆಸಕ್ತಿ ಯಿಂದ ಪಾಲ್ಗೊಳ್ಳುತ್ತಿದ್ದರು.
ಅದರಲ್ಲಿ ಕೂಡ ಕೆಲವು ವೇಷವನ್ನು ಮಾಡುವ ಮೂಲಕ ಖುಷಿ ಪಟ್ಟವರು. ಆ ಕಾಲದಲ್ಲಿ ಮುಸ್ಲಿಂ ಸಮುದಾಯದ ಹುಡುಗ ಯಕ್ಷಗಾನ ನೋಡುವುದು , ಬಹಳ ಕ್ರಾಂತಿ ಕಾರಿ ವಿಷಯ ಆಗಿತ್ತು.
ವೇಷ ಮಾಡಿದ್ರೆ ಹೇಳಬೇಕೆ?ಇದು ಸಂಪ್ರದಾಯದ ಮುಸ್ಲಿಂ ಸಮುದಾಯದ ವ್ಯಕ್ತಿಗಳು ಹಮೀದ್ ಬಗ್ಗೆ ತಮ್ಮ ಗುರುಗಳಲ್ಲಿ ದೂರು ಕೊಟ್ಟು ಎಚ್ಚರಿಸುವ ಹಾಗೆ ಮಾಡಿತ್ತು.ಮಾತ್ರ ಅಲ್ಲ ಅವರ ತಂದೆಗೂ ಪಳ್ಳಿಯಿಂದ ನೋಟೀಸ್ ಬಂದಿತ್ತಂತೆ.ಆದರೂ ಅವರ ತಂದೆ ಮಗನ ಯಕ್ಷಗಾನ ಪ್ರೇಮಕ್ಕೆ ಯಾವುದೇ ಅಡ್ಡಿಪಡಿಸುವುದಿಲ್ಲವಂತೆ…!.
ಅಂದಿನಿಂದ ಯಕ್ಷಗಾನ ವೇಷ ಹಾಕುದಿಲ್ಲ ಆದ್ರೆ ಆಟ ನೋಡಲು ಬಿಡಿ ಎಂದು ಅವರು ಗುರು ಗಳಲ್ಲಿ ವಿನಂತಿಸಿ ಅನುಮತಿ ಪಡೆದಿದ್ದರಂತೆ ಹಮೀದ್ ರವರು.ಈ ಘಟನೆ ನಂತರ ಹಮೀದ್ ರವರು ಹೆಚ್ಚು ಹೆಚ್ಚು ಆಟ ನೋಡಲು ಶುರುಮಾಡಿದ್ದರಂತೆ…! ಸ್ವಲ್ಪ ವರ್ಷದ ನಂತರ ಅವರು ವಿದೇಶಕ್ಕೆ ಉದ್ಯೋಗ ನಿಮ್ಮಿತ್ತ ಹೋದರು. ಕೆಲವು ವರ್ಷ ದ ಬಳಿಕ ವಿದೇಶದಿಂದ ಬಂದ ಬಳಿಕ ಕೂಡ ಹಮೀದ್ ಆಟ ನೋಡುವುದನ್ನು ಬಿಡಲಿಲ್ಲ. ಕ್ರೀಡಾ ಪ್ರೇಮವನ್ನು ಮರೆಯಲಿಲ್ಲ.ಅಂದಿನಿಂದ ಅವರಿಗೆ ” ಆಟ ನೋಡುವ ಹಮೀದಾಕ” ಎಂಬ ಹೆಸರು ಖಾಯಂ ಆಯಿತು.
ಇಂದಿಗೂ ತಮ್ಮ ಯಕ್ಷಗಾನ ಪ್ರೀತಿ ಹಮೀದ್ ಇಟ್ಟುಕೊಂಡಿದ್ದಾರೆ ಎಂಬುದು ಉಲ್ಲೇಖನೀಯ.ಹಿಂದೆ ಇವರು ರಾಮಚಂದ್ರ ಆಚಾರ್ ರು ಪ್ರತಿ ಆಟಕ್ಕೆ ಹೋಗುವಾಗ ಜೊತೆಯಲ್ಲಿ ಹೋಗುತ್ತಿದ್ದ ಅನುಭವ ಇಂದಿಗೂ ಹಮೀದ್ ನೆನಪಿಸಿಕೊಳ್ಳುತ್ತಾರೆ.ಹಮೀದ್ ರ ಯಕ್ಷಗಾನ ಪ್ರೇಮ ಬಗ್ಗೆ ಮಾಣಿ ಭರಣಿಕೆರೆ ವೆಂಕಪ್ಪ ಮೂಲ್ಯ ರು ಇಂದಿಗೂ ಸೊಗಸಾಗಿ ಯಾರು ಕೇಳಿದರೂ ವಿವರಿಸುತ್ತಾರೆ. ಬೇಸಿಗೆಯಲ್ಲಿ ರಾತ್ರಿಯ ಸಮಯದಲ್ಲಿ ಮಾಣಿ ಪೇಟೆಯಲ್ಲಿ 9ಗಂಟೆ ಯ ಬಳಿಕ ಹಮೀದ್ ರವರು ಯಾರಿಗಾದರೂ ಕಾಣಸಿಕ್ಕರೆ” ಹಮೀದಾಕ ಇನಿ ಆಟ ಓಲು”ಎಂದು ಕೆಲವು ರಿಕ್ಷಾ ದವರು,ಕೆಲವು ಯುವಕರು ತಮಾಷೆ ಮಾತುಗಳನ್ನಾಡುದು ಮಾಮುಲು.
ಇಂದಿನ ದಿನಗಳಲ್ಲಿ ಅವರು ಕೇಬಲ್ ಟಿವಿಯಲ್ಲಿ ಬರುವ ಆಟಗಳನ್ನು ನೋಡುತ್ತಾರೆ.ವ್ಯವಹಾರ ಸಮಯದಲ್ಲಿ ಯೂಟ್ಯೂಬ್ ನಲ್ಲಿ ಆಟ ನೋಡುತ್ತಾರೆ. ಇವರಿಗೆ ರಾಜಕೀಯ ಪಾರ್ಟಿ ಯಿಂದ ಕೆಲವು ಮಂದಿಯಿಂದ ಕಳೆದ ಪಂಚಾಯತ್ ಓಟಿಗೆ ನಿಲ್ಲಬೇಕು ಎಂದು ಒತ್ತಾಯ ಇತ್ತು.ಆದರೆ ಇವರು ರಾಜಕೀಯ ಕ್ಕೆ ಹೋದರೆ ಆಟ ನೋಡಲು ಆಗುದಿಲ್ಲ ಎಂದು ಅದರ ಬಗ್ಗೆ ಆಲೋಚನೆ ಮಾಡಲಿಲ್ಲ.ರಾಜಕೀಯ ಕ್ಕೆ ಹೋಗಲು ಹಣ ಬೇಕು.ಆಟ ನೋಡಿದರೆ ಜೀವನದಲ್ಲಿ ಕಲಿಯಲು ಸಿಗುತ್ತದೆ ಎಂಬುದು ಹಮೀದ್ ರವರ ಮನದಾಳದ ಮಾತುಗಳು.
ಒಂದು ಕಲೆ ಉಳಿಯಬೇಕಾದರೆ ಪ್ರೇಕ್ಷಕರ ಅವಶ್ಯಕತೆ ಇದೆ.ಯಕ್ಷಗಾನ ಕಲಾಭಿಮಾನಿಗಳಲ್ಲಿ
ಸಾವಿರಾರು ಆಟ ನೋಡಿದ ಹಮೀದ್ ರಂತಹ ಯಕ್ಷಗಾನ ಪ್ರೇಮಿಗಳು ತುಸು ವಿರಳವೇ ಎನ್ನಬಹುದು.ಹೀಗೆ ನಾನು ಕಂಡ ಯಕ್ಷಗಾನ ಕಲಾಭಿಮಾನಿಗಳಲ್ಲಿ ಹಮೀದ್ ಪಲ್ಕೆಯವರು ವಿಶೇಷ ವ್ಯಕ್ತಿ ಯಾಗಿ ಗುರುತಿಸಿದ್ದೇನೆ.
✍️ *ಬರಹ : ಎಂ.ವಿ.ಪಿ. ಮಾಣಿ*