ಬಂಟ್ವಾಳ: ಬಂಟ್ವಾಳ ಲೋರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ನ 2021 22 ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 15 ಸಂಜೆ 4 ಗಂಟೆಗೆ ಲೊರೆಟ್ಟೋ ಪದವಿನ ರೋಟರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ನೂತನ ಅಧ್ಯಕ್ಷ ರೊ. ರಾಘವೇಂದ್ರ ಭಟ್ ಹೇಳಿದರು.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ವ ಜಿಲ್ಲಾ ಗವರ್ನರ್ ರೊ. ಡಾ. ಭರತೇಶ ಆದಿರಾಜ ಅವರು ನೂತನ ಪದಾಧಿಕಾರಿಗಳ ಪದಗ್ರಹಣ ನಡೆಸಿಕೊಡುವರು.
ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲೆ 3181ರ ನಿಯೋಜಿತ ಗವರ್ನರ್ ರೊ.ಪ್ರಕಾಶ್ ಕಾರಂತ್, ವಲಯ 4 ರ ಸಹಾಯಕ ಗವರ್ನರ್ ರೊ.ಸುರೇಂದ್ರ ಕಿಣಿ,
ವಲಯ ಕಾರ್ಯದರ್ಶಿ ರೊ.ಜಯರಾಮ ರೈ, ವಲಯ ಸೇನಾನಿ ರೊ.ಅವಿಲ್ ಮಿನೇಜಸ್ ಭಾಗವಹಿಸಲಿದ್ದಾರೆ ಎಂದರು. ನೂತನ ಅಧ್ಯಕ್ಷರಾಗಿ ರೊ.ರಾಘವೇಂದ್ರ ಭಟ್ ಹಾಗೂ ಕಾರ್ಯದರ್ಶಿಯಾಗಿ ರೊ.ರಮೇಶ್ ನಾಯಕ್ ಮತ್ತವರ ತಂಡ ಅಧಿಕಾರ ವಹಿಸಲಿದ್ದಾರೆ ಎಂದರು.
ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೊ.ಶೇಖರ್ ಮೆಹ್ತಾ ಅವರ “ಸೇವೆಯಿಂದ ಜೀವನವನ್ನು ಬದಲಾಯಿಸು” ಎಂಬ ಮಹತ್ವದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇದಕ್ಕೆ ಪೂರಕವಾದ ಕಾರ್ಯಕ್ರಮಗಳ ಜೊತೆಗೆ ರೋಟರಿ ಜಿಲ್ಲೆಯಿಂದ ನಿರ್ದೇಶಿಸಲ್ಪಟ್ಟ ಕಾರ್ಯಕ್ರಮಗಳನ್ನು ವರುಷವಿಡೀ ಹಮ್ಮಿಕೊಳ್ಳಲಿದ್ದೇವೆ ಎಂದರು.
ಕೋವಿಡ್ ಹಿನ್ನಲೆಯಲ್ಲಿ ಸರಕಾರದ ಮಾರ್ಗಸೂಚಿಯನುಸಾರ ಪದಗ್ರಹಣ ಸಮಾರಂಭವನ್ನು ಸರಳವಾಗಿ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಕಾರ್ಯದರ್ಶಿ ರೊ.ರಮೇಶ್ ನಾಯಕ್, ನಿಕಟಪೂರ್ವ ಅಧ್ಯಕ್ಷ ರೊ.ಅಂತೋನಿ ಸಿಕ್ವೇರ, ಪದಾಧಿಕಾರಿಗಳಾದ ರೊ.ಸುರೇಶ್ ಕುಮಾರ್, ರೊ.ರಾಮಚಂದ್ರ ಶೆಟ್ಟಿಗಾರ್, ಹರಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.