ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಪ್ರದೇಶಾಭಿವೃದ್ಧಿ ನಿಧಿಯಿಂದ ಮಂಜೂರಾತಿಗೊಂಡ , ಕೆ.ಎಸ್. ಆರ್. ಟಿ.ಸಿ,ಸಾರಿಗೆ ಸುರಕ್ಷ ಯೋಜನೆಯ ಸಂಚಾರಿ ಐಸಿಯು ಬಸ್ಸು ಕುಕ್ಕಿಪಾಡಿ ಗ್ರಾಮ ಪಂಚಾಯತ್ ಆವರಣದಲ್ಲಿ ಇಂದು ಆಗಮಿಸಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಿದರು ಸುಮಾರು ನೂರಕ್ಕೂ ಹೆಚ್ಚು ಜನರು ತಮ್ಮ ತಮ್ಮ ಸಕ್ಕರೆ ಖಾಯಿಲೆ, ಬಿಪಿ, ಇನ್ನಿತರ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.ಈ ಸಮಯದಲ್ಲಿ ಪಂಚಾಯತ್ ಅಧ್ಯಕ್ಷರಾದ ಸುಜಾತ ಆರ್ ಪೂಜಾರಿ, ಉಪಾಧ್ಯಕ್ಷಾರಾದ ಯೊಗೀಶ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ತುಳಸಿನಿ, ಪಂಚಾಯತ್ ಸದಸ್ಯರುಗಳಾದ ಲಿಂಗಪ್ಪ ಪೂಜಾರಿ, ಶೇಖರ್ ಶೆಟ್ಟಿ, ಬೇಬಿ, ಗೀತಾ, ಪ್ರತಿಭಾ ಶೆಟ್ಟಿ, ಶೋಭ, ಶ್ರೀಮತಿ ಪುಷ್ಪ, ಚಂದ್ರ ಪೂಜಾರಿ, ಪೂರ್ಣಿಮಾ, ಪಂಚಾಯತ್ ಸಿಬ್ಬಂದಿಗಳು,ಆಶಾ ಕಾರ್ಯ ಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಜರಿದ್ದು ಆರೋಗ್ಯ ತಪಾಸಣೆ ಮಾಡಿಸಿಕೊಂಡರು