ಬಂಟ್ವಾಳ:*ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಯುವವೇದಿಕೆಯ ವತಿಯಿಂದ ಬಿ ಸಿ ರೋಡ್ ಕೈಕುಂಜೆ ರುದ್ರಭೂಮಿ ಪರಿಸರದಲ್ಲಿ ಜಿಲ್ಲಾಧ್ಯಕ್ಷರಾದ ಸುಕುಮಾರ್ ಬಂಟ್ವಾಳ್ ರವರ ನೇತೃತ್ವದಲ್ಲಿ ಯುವಕರು ತಾವೇ ಸ್ವತಃ ಮನೆಯಿಂದ ತಂದು ಪರಿಸರ ರಕ್ಷಣೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಆಹಾರದ ಉದ್ದೇಶಕ್ಕಾಗಿ ತೆಂಗು, ಕಂಗು ಹಾಗೂ ಹಣ್ಣಿನ ಗಿಡಗಳಾದ ನೇರಳೆ, ಪೇರಳೆ, ಮಾವು, ಹಲಸು, ಸೀತಾಫಲ ಇತ್ಯಾದಿ ಹಾಗೂ ಔಷಧಿಯ ಗಿಡಗಳಾದ ಬೇಂಗ, ಹಾಳೆ ಮರ, ಕಹಿಬೇವು, ವೀಳ್ಯದೆಲೆ ಗಿಡಗಳನ್ನು ನೆಡುವುದರೊಂದಿಗೆ ಗಿಡಗಳ ಒಂದು ವರ್ಷದ ಸರಂಕ್ಷಣೆ ಜವಾಬ್ದಾರಿಯನ್ನು ವೇದಿಕೆ ಯುವಕರು ವಹಿಸಿಕೊಂಡರು .
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ನಾರಾಯಣ ಸಿ ಪೆರ್ನೆ, ಕಾರ್ಯದರ್ಶಿ ಪುನಿತ್ ಮೈರಾನಪಾದೆ ಕೋಶಾಧಿಕಾರಿ ಕವಿರಾಜ್ ಚಂದ್ರಿಗೆ ಜಿಲ್ಲಾ ವಲಯ ಸಂಚಾಲಕರಾದ ಕಾರ್ತಿಕ್ ಮೈಯರಬೈಲು, ಜತೆ ಕಾರ್ಯದರ್ಶಿ ವಿತೇಶ್ ಕಾಮಾಜೆ, ಉಪಾಧ್ಯಕ್ಷರಾದ ಹರಿಪ್ರಸಾದ್ ಭಂಡಾರಿಬೆಟ್ಟು, ಸದಸ್ಯರಾದ ಕಿಶೋರ್ ಬಂಗೇರ,ನಿತೇಶ್ ಪಲ್ಲಿಕಂಡ, ಮೋಹನ್ ಮಡ್ಯಾರ್, ರಾಮ ಫಿಟ್ಟರ್ ಡಾ| ಬಾಲಕೃಷ್ಣ ಅಗ್ರಬೈಲು, ಸುರೇಶ್ ಬೋರುಗುಡ್ಡೆ , ನಿಶಾಂತ್ ಬಂಟ್ವಾಳ್, ಗೌರವ ಸಲಹೆಗಾರರಾದ ಶೇಷಪ್ಪ ಮಾಸ್ಟರ್, ಸುರೇಶ್ ಸಾಲಿಯಾನ್, ನಾರಾಯಣ್ ಹೊಸ್ಮರ್, ವಿಠ್ಠಲ್ ಪಲ್ಲಿಕಂಡ, ನಾಗೇಶ್ ಟೈಲರ್, ಸುಧಾಕರ್ ಸಾಲಿಯಾನ್, ಗಣೇಶ್ ಕಾಮಾಜೆ, ಲಕ್ಷ್ಮಣ್ ಅಗ್ರಬೈಲು, ನಾಗೇಶ್ ಬಾಳೆಹಿತ್ಲು ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೇಶವ ದೈಪಲ ಸ್ಮಶಾನ ಸುಮಿತಿಯ ಉಸ್ತುವಾರಿ ಸದಸ್ಯ ಪದ್ಮನಾಭ ಸಹಕರಿಸಿದರು*.