ಬಂಟ್ವಾಳ: ದ ಕ ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಬಂಟ್ವಾಳ ವಲಯ ಇದರ ವತಿಯಿಂದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಆಯ್ಕೆ ಯಾದ ಸಂಘದ ಸಕ್ರಿಯ ಸದಸ್ಯರಾದ ಉಮೇಶ್ ನೆಲ್ಲಿಗುಡ್ಡೆ ಯವರನ್ನು ಸಂಘದ ಮಾಸಿಕ ಸಭೆಯಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು , ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಅಣ್ಣು ಪೂಜಾರಿ , ಕಾರ್ಯದರ್ಶಿ ಸುರೇಶ ಕುಲಾಲ್ , ಕೋಶಾಧಿಕಾರಿ ರಾಜೇಶ್ ಕುಲಾಲ್ , ಗೌರವ ಸಲಹೆಗಾರರಾದ ಸುಧಾಕರ್ ಸಾಲ್ಯಾನ್ , ಪ್ರಶಾಂತ್ ಭಂಡಾರ್ಕರ್ , ರಾಜೇಶ್ ಸಾಲ್ಯಾನ್ , ಸುಧೀರ್ ಬೈಪಾಸ್ , ಉಪಾಧ್ಯಕ್ಷರಾದ ಪ್ರಸಾದ್ ಬಂಗೇರ , ರಮೇಶ್ ಬೈಪಾಸ್ , ಸಂಘಟನಾ ಕಾರ್ಯದರ್ಶಿ ಜಗದೀಶ್ ಕಲ್ಲಡ್ಕ ಹಾಗು ಸಂಘದ ಸದಸ್ಯರು ಉಪಸ್ಥಿತರಿದ್ದರು .