ಬಂಟ್ವಾಳ: ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ ಆಶ್ರಯದಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿ ಹಾಗೂ ಕಂದಾಯ ಇಲಾಖಾ ಸವಲತ್ತುಗಳ ಮಾಹಿತಿ ಶಿಬಿರ ಜು.28ರಂದು ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಬಂಟ್ವಾಳ ತಾ. ಪಂ. ಕಾರ‍್ಯನಿರ್ವಾಹಕ ಅಽಕಾರಿ ರಾಜಣ್ಣ ಅವರು ಕಾರ್ಯಕ್ರಮ ಉದ್ಘಾಟಿಸುವರು. ಇರ್ವತ್ತೂರು ಗ್ರಾ. ಪಂ. ಅಧ್ಯಕ್ಷ ಎಂ.ಪಿ.ಶೇಖರ್ ಅಧ್ಯಕ್ಷತೆ ವಹಿಸುವರು.
ಬಂಟ್ವಾಳ ಕಾರ್ಮಿಕ ನಿರೀಕ್ಷಕಿ ಮರ್ಲಿನ್ ಗ್ರೇಸಿ ಡಿಸೋಜ ಮತ್ತು ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ನಾಯಕ್ ಕರ್ಪೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು. ಅಸಂಘಟಿತ ಕಾರ್ಮಿಕರು ಮತ್ತು ಅರ್ಹ ಫಲಾನುಭವಿಗಳು ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಲು ಈ ಶಿಬಿರದಲ್ಲಿ ಭಾಗವಹಿಸಿ ಹೆಸರನ್ನು ನೊಂದಾಯಿಸಬಹುದು ಎಂದು ಸಮಿತಿ ಪ್ರಕಟಣೆ ತಿಳಿಸಿದೆ.