ಬಂಟ್ವಳ : ಕಲಾಶ್ರಯದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್(ರಿ. )
ಸದಸ್ಯರ ಗುರುತಿನ ಚೀಟಿಯ ಬಿಡುಗಡೆ ಸಮಾರಂಭವು ನಡೆಯಿತು.
ಜುಲೈ 17 ಶನಿವಾರ ಮಧ್ಯಾಹ್ನ ಬಂಟ್ವಳ ತಾಲೂಕು ಕಶೆಕೋಡಿಯ ವೇ.ಬ್ರ. ಶ್ರೀ ಸೂರ್ಯನಾರಾಣಯಣ ಭಟ್ಟ್ ಇವರ *ಕಲಾಶ್ರಯ*ದಲ್ಲಿ ನಮ್ಮ ಪುರೋಹಿತ ಪರಿಷತ್ತಿನ ಸದಸ್ಯರ ಗುರುತಿನ ಚೀಟಿಯ ಬಿಡುಗಡೆ ಸಮಾರಂಭವು ನಡೆಯಿತು .
ಪರಿಷತ್ತಿನ ಕಾರ್ಯಧ್ಯಕ್ಷರು, ದಕ ಜಿಲ್ಲಾ ಪ್ರಭಾರಿಗಳು ,ಆಗಿರುವ ವೇದಬ್ರಹ್ಮಶ್ರೀ ಡಾ!B,S ರಾಘವೇಂದ್ರ ಭಟ್ ಇವರ ಉಪಸ್ಥತಿಯಲ್ಲಿ ಹಿರಿಯರಾದ
ವೇದಮೂತಿ೯ ಶ್ರೀ ಪೊಳಲಿ ವೆಂಕಪ್ಪಯ್ಯಭಟ್ಟರ ಶುಭಾಶೀವಾ೯ದಗಳೋಂದಿಗೆ ಪರಿಷತ್ತಿನ ಪ್ರಧಾನ ಕಾರ್ಯದಶಿ೯ಗಳು ಪೂಜ್ಯರಾದ ವೇದಬ್ರಹ್ಮಶ್ರೀ ಡಾ. ಭಾನುಪ್ರಕಾಶ ಶಮ೯ರ ದಿವ್ಯ ಹಸ್ತದಲ್ಲಿ ಬಿಡುಗಡೆಗೊಳಿಸಿದರು. ಪರಿಷತ್ ನಲ್ಲಿ ಎಲ್ಲಾ ನೋಂದಯಿತ ಸದಸ್ಯರಿಗೆ ಹಸ್ತಾಂತರಿಸುವ ಸರಳ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ,ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್,ವೇದಮೂರ್ತಿ ಮಂಜುನಾಥ ಶಾಸ್ತ್ರೀ ಪರಿಷತ್ ನ ಜಿಲ್ಲಾಧ್ಯಕ್ಷರು ಕೃಷ್ಣ ರಾಜ್ ಭಟ್.ಹಾಗು ಎಲ್ಲಾ ತಾಲೂಕಿನ ಅಧ್ಯಕ್ಷರು ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು.