ಚಾರ್ಮಾಡಿ ಘಾಟ್ ರಸ್ತೆಯ ಮೇಲೆಯೇ ನೀರು ಹರಿದು ಹೋಗುವ ವಿಡಿಯೋ ತುಣುಕು ಎಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಪುಲ್ ವೈರಲ್ ಆಗಿತ್ತು ಆದರೆ ಇದು ಚಾರ್ಮಾಡಿ ಅಲ್ಲ ಬೆಳಗಾವಿ ಗೋವಾ ರಸ್ತೆಯ ಅಂಬೋಲಿ ಘಾಟ್ ಎಂಬ ಸತ್ಯ ಬೆಳಕಿಗೆ ಬಂದಿದೆ.
ಚಾರ್ಮಾಡಿ ಘಾಟ್ ರಸ್ತೆಯ ಕುಸಿತ ಕಂಡ ಬೆನ್ನಲ್ಲೇ ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಚಾರ್ಮಾಡಿ ಫಾಲ್ಸ್ ಒಂದರ ಮೇಲಿಂದ ಹರಿದ ನೀರು ನೇರವಾಗಿ ಹೆದ್ದಾರಿ ಯಲ್ಲಿಯೇ ಹರಿದು ಹೋಗುತ್ತಿದ್ದು ಸದ್ಯ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂಬ ವಿಚಾರ ವನ್ನು ಬಿಂಬಿಸಲಾಗಿತ್ತು.
ಆದರೆ ಅದು ಚಾರ್ಮಾಡಿ ಅಲ್ಲ ಬೆಳಗಾವಿ ಅಂಬೋಲಿ ಘಾಟ್ ಎಂಬುದು ಗೊತ್ತಾಗಿದೆ.
ಗುಡ್ಡ ಪ್ರದೇಶದಿಂದ ರಭಸವಾಗಿ ಹೆದ್ದಾರಿಯ ಮೇಲೆ ನೀರು ಹರಿದು ಬಂದು ರಸ್ತೆಯ ಮೇಲೆಯೇ ನೀರು ಸರಾಗವಾಗಿ ಹರಿಯುವ ದೃಶ್ಯ ಕಂಡು ಬಂದಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.
ಇದರ ಬಗ್ಗೆ ಸ್ಪಷ್ಟೀಕರಣ ಕೂಡ ಬಂದಿದೆ.