ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ಬಳಿ ವೆಂಟೆಡ್ ಡ್ಯಾಂ ಅಥವಾ, ನರಿಕೊಂಬು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ / ಬ್ಯಾರೇಜ್ ನಿರ್ಮಾಣದ ಶಾಸಕರ ಪ್ರಸ್ತಾವನೆ ಕುರಿತು ರಾಜ್ಯ ಸಣ್ಣ ನೀರಾವರಿ ಇಲಾಖೆ ಸಚಿವ ಎ.ಸಿ.ಮಾದುಸ್ವಾಮಿ ಅವರು ಬಂಟ್ವಾಳ ಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಯೋಜನೆ ಯ ಸಾಧ್ಯತೆ ಹಾಗೂ ಪ್ರಯೋಜನ ಗಳ ಕುರಿತು ಸಚಿವರಿಗೆ ವಿವರಿಸಿದರು ಸಚಿವರು ಸಂಬಂಧ ಪಟ್ಟ ಅಧಿಕಾರಿಗಳಿಂದ ಮಾಜಿ ಮಾಹಿತಿ ಪಡೆದರು.
ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ , ಇಂಜಿನಿಯರಿಗಳಾದ ರಾಜಶೇಖರ ಎಡಹಳ್ಳಿ, ಗೋಕುಲ್ ದಾಸ್, ಶಿವಪ್ರಸನ್ನ ಮೊದಲಾದವರು ಇದ್ದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಬಿಜೆಪಿ ಪ್ರಮುಖರಾದ ಪುಷ್ಪ ರಾಜ ಚೌಟ ಮಾಣಿ,ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಯಶೋಧರ ಕರ್ಬೆಟ್ಟು ಮತ್ತಿತರರು ಹಾಜರಿದ್ದರು.