ವಿಟ್ಲ: ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕುಡ್ತಮುಗೇರು ಮಂಕುಡೆ ಶ್ರೀನಿವಾಸ ಆಚಾರ್ ಮನೆಯಲ್ಲಿ ಮಂಗಳವಾರ ರಾತ್ರಿ 11ಗಂಟೆಯ ಸುಮಾರಿಗೆ ಅಂಗಳದಲ್ಲಿ ಕಟ್ಟಿಹಾಕಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿದೆ.
ಕರು ಬೊಬ್ಬೆ ಹೊಡೆಯುವುದನ್ನು ಕೇಳಿಸಿಕೊಂಡ ಶ್ರೀನಿವಾಸ ಆಚಾರ್ ಹೊರಗಡೆ ಬಂದು ನೋಡುವಷ್ಟರಲ್ಲಿ ನಾಯಿಗಳು ಚಿರತೆಯನ್ನು ಓಡಿಸಿದ್ದರಿಂದಾಗಿ ಕರುವಿನ ಪ್ರಾಣ ಉಳಿದಿದೆ.
ಚಿರತೆ ದಾಳಿಯಿಂದಾಗಿ ಕರುವಿನ ಬಲ ಭುಜ, ಬಾಲದ ಬುಡ ಹಾಗೂ ಗುದದ್ವಾರ ಪಕ್ಕ ಮತ್ತು ಎಡ ಗಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.