ಬಂಟ್ವಾಳ: ರಾಜ್ಯದ ಮುಖ್ಯಮಂತ್ರಿ ಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆ.
ಬಿ.ಎಸ್.ಯಡಿಯೂರಪ್ಪ ರಾಜಿನಾಮೆ ಬಳಿಕ ರಾಜ್ಯದ ನೂತನ ಮುಖ್ಯಮಂತ್ರಿ ಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆಯಾಗಿದ್ದಾರೆ.
ಬಿ.ಎಸ್.ವೈ ಅವರ ಸಚಿವ ಸಂಪುಟದ ದಲ್ಲಿ ಗೃಹಸಚಿವರಾಗಿದ್ದ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಬಸವರಾಜ್ ಬೊಮ್ಮಾಯಿ ಅವರನ್ನು ಹೈ ಕಮಾಂಡ್ ಆಯ್ಕೆ ಮಾಡಿದೆ.
ಸಾಕಷ್ಟು ಕುತೂಹಲ ಕೆರಳಿಸಿದ್ದ ರಾಜ್ಯದ ಮುಖ್ಯ ಮಂತ್ರಿ ಹುದ್ದೆಗೆ
ಕೊನೆಗೂ ಬಸವರಾಜ್ ಅವರು ಆಯ್ಕೆಯಾಗಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಅನೇಕ ಹೆಸರುಗಳು ಮುಂಚೂಣಿಯ ಲ್ಲಿತ್ತು.
ಕೊನೆಗೂ ಬಹಳಷ್ಟು ಕುತೂಹಲ ಮೂಡಿಸಿದ್ದ ರಾಜ್ಯದ ಮುಖ್ಯಮಂತ್ರಿ ಆಯ್ಕೆ ಯಾಗುವ ಮೂಲಕ ತೆರೆಎಳೆಯಲಾಗಿದೆ.
ಇನ್ಮುಂದೆ ರಾಜ್ಯರಾಜಕೀಯದ ಚಿತ್ರಣ ಯಾವ ರೀತಿಯಲ್ಲಿ ಇದೆ ಎಂಬುದನ್ನು ಕಾದುನೋಡಬೇಕಾಗಿದೆ.