ಬಂಟ್ವಾಳ: ಚಾರ್ಮಾಡಿ ಘಾಟ್ ರಸ್ತೆಯ ಮೇಲೆಯೇ ನೀರು ಹರಿದು ಹೋಗುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಇದೀಗ ಪುಲ್ ವೈರಲ್ ಆಗಿದೆ.
ಚಾರ್ಮಾಡಿ ಘಾಟ್ ರಸ್ತೆಯ ಕುಸಿತ ಕಂಡ ಬೆನ್ನಲ್ಲೇ ಅದರ ದುರಸ್ತಿ ಕಾರ್ಯ ನಡೆದಿತ್ತು. ಇದೀಗ ಚಾರ್ಮಾಡಿ ಫಾಲ್ಸ್ ಒಂದರ ಮೇಲಿಂದ ಹರಿದ ನೀರು ನೇರವಾಗಿ ಹೆದ್ದಾರಿ ಯಲ್ಲಿಯೇ ಹರಿದು ಹೋಗುತ್ತಿದ್ದು ಸದ್ಯ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಗುಡ್ಡ ಪ್ರದೇಶದಿಂದ ರಭಸವಾಗಿ ಹೆದ್ದಾರಿಯ ಮೇಲೆ ನೀರು ಹರಿದು ಬಂದು ರಸ್ತೆಯ ಮೇಲೆಯೇ ನೀರು ಸರಾಗವಾಗಿ ಹರಿಯುವ ದೃಶ್ಯ ಕಂಡು ಬಂದಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.