Sunday, April 7, 2024

ಚೆಂಡ್ತಿಮಾರ್ ಭಾಗದ ವಿದ್ಯಾರ್ಥಿಗಳಿಗೆ ನೇತ್ರಾವತಿ ನದಿಕಿನಾರೆಯೆ ಪಾಠ ಶಾಲೆ. ನೆಟ್ ವರ್ಕ್ ಸಮಸ್ಯೆಯಿಂದ ಆನ್ ಲೈನ್ ಕ್ಲಾಸ್ ಗಳಿಗಾಗಿ ನೇತ್ರಾವತಿ ನದಿಯ ಕಿನಾರೆಗೆ ವಿದ್ಯಾರ್ಥಿಗಳ ದಂಡು!

ಬಂಟ್ವಾಳ: ಒಂದೆಡೆ ಆನ್ ಲೈನ್ ಕ್ಲಾಸ್ ಗಳು, ಇನ್ನೊಂದು ಕಡೆ ಎಲ್ಲಾ ಕಂಪೆನಿಗಳ ನೌಕರರಿಗೆ ವರ್ಕ್ ಪ್ರಂಮ್ ಹೋಮ್ ಆದರೆ ನೆಟ್ ವರ್ಕ್ ಮಾತ್ರ ವರ್ಕ್ ಆಗದೆ ಜನ ಸಂಕಷ್ಟಕ್ಕೆ ಸಿಲುಕಿದ ನಗರ ಪ್ರದೇಶದ ಜನರ ಕೂಗಿನ‌ ಕಥೆ ಇಲ್ಲಿದೆ ನೋಡಿ!

ದೂರದ ಗುಡ್ಡಗಾಡಿನ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಯಾದರೆ ನಾವು ಅಷ್ಟೊಂದು ಗಂಭೀರವಾಗಿ ಯೋಚನೆ ಮಾಡಲಿಕ್ಕೆ ಇಲ್ಲ. ಆದರೆ ಬಂಟ್ವಾಳದ ಪುರಸಭೆ ವ್ಯಾಪ್ತಿಯಲ್ಲೇ ನೆಟ್‌ವರ್ಕ್ ಸಮಸ್ಯೆ ಜನರನ್ನು ಕಾಡುತ್ತಿದೆ ಎಂದರೆ ನೀವು ನಂಬುತ್ತೀರಾ….

ಶಾಲೆ ಪುಟ್ಟ ಮಕ್ಕಳಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳು ನೆಟ್‌ವರ್ಕ್ ಹುಡುಕಿಕೊಂಡು ನೇತ್ರಾವತಿ ನದಿ ಬದಿಗೆ ಬಂದು ಪಾಠ ಕೇಳಬೇಕಾದ ಸ್ಥಿತಿ ಇದ್ದು, ಪೋಷಕರು ನಿತ್ಯ ಟೆನ್ಸನ್ ಜೀವನದ ಮೇಲೆ ಬದುಕುತ್ತಿದ್ದಾರೆ.

ಮಕ್ಕಳ ಜೊತೆ ಹೆತ್ತವರು ಹೋಗದಿದ್ದರೆ ಇನ್ನು ಮಕ್ಕಳು ನೀರಿಗಿಳಿದು ಹೆಚ್ಚು ಕಮ್ಮಿಯಾದರೆ ಯಾರು ಹೊಣೆ ಎಂಬ ಪ್ರಶ್ನೆಯೂ ಅವರದು.

ನೆಟ್ ವರ್ಕ್ ಸಮಸ್ಯೆ ನಿಜವಾಗಿಯೂ ನೋಡಿದರೆ ಅದು ಇಂದು ನಿನ್ನೆಯದಲ್ಲ, ಅದರ ಕಷ್ಟ ಅನುಭವಿಸಿದವರಿಗೆ ಗೊತ್ತು ಆದರೆ ಪ್ರಸ್ತುತ ಕೊರೊನಾ ಸಂಕಷ್ಟದ ದಿನಗಳಲ್ಲಿ ಮಕ್ಕಳಿಗೆ ಆನ್‌ಲೈನ ಕ್ಲಾಸ್ ಹಾಗೂ ವರ್ಕ್ ಪ್ರಂಮ್ ಹೋಮ್ ಎಂಬ ಹೊಸ ಜೀವನ ಆರಂಭವಾದ ಹಿನ್ನೆಲೆಯಲ್ಲಿ ಎಲ್ಲಾ ಕಡೆಯ ಸಮಸ್ಯೆ ಅನಾವರಣ ಗೊಂಡಿದೆ.

ಬಂಟ್ವಾಳ ಪುರಸಭಾ ವ್ಯಾಪ್ತಿಯ ಚಂಡ್ತಿಮಾರ್-ಮಣಿಹಳ್ಳ ಭಾಗದಲ್ಲಿ ಈ ಸಮಸ್ಯೆಯಿದ್ದು, ನೇತ್ರಾವತಿ ನದಿ ಕಿನಾರೆಗೆ ಹೋದರೆ ಮಾತ್ರ ರೇಂಜ್ ಸಿಗುತ್ತದೆ.!

*ನೇತ್ರಾವತಿ ನದಿ ಬದಿ ವಿದ್ಯಾರ್ಥಿಗಳಿಗೆ ಪಾಠ ಶಾಲೆ*

ಮನೆಯೆ ಮೊದಲ ಪಾಠ ಶಾಲೆ ಎಂಬ ಮಾತು ಹಿಂದಿನ ಕಾಲದ್ದು ಆದರೆ ಪ್ರಸ್ತುತ ನೆಟ್ ವರ್ಕ್ ಸಮಸ್ಯೆ ಯಿಂದ ಬಳಲುತ್ತಿರುವ ಬಂಟ್ವಾಳದ ವಿದ್ಯಾರ್ಥಿಗಳಿಗೆ ನೇತ್ರಾವತಿ ನದಿ ಕಿನಾರೆಯೆ ಪಾಠ ಶಾಲೆ ಆಗಿದೆ.

ಚೆಂಡ್ತಿಮಾರ್ ಭಾಗದ ಅನೇಕ ಮನೆಗಳ ಮಕ್ಕಳು ಆನ್‌ಲೈನ್ ಕ್ಲಾಸ್‌ಗಾಗಿ ಚಂಡ್ತಿಮಾರ್ ಬಳಿ ನೇತ್ರಾವತಿ ನದಿ ಕಿನಾರೆಗೆ ಬರಬೇಕಾದ ಸ್ಥಿತಿ ಇದೆ. ಬೆಳಗ್ಗೆ ಹಾಗೂ ಸಂಜೆ ಈ ಭಾಗದಲ್ಲಿ ಸುಮಾರು ೪೦ಕ್ಕೂ ಅಧಿಕ ಮಕ್ಕಳು ಸೇರುತ್ತಿದ್ದು, ಮೊಬೈಲ್ ಹಿಡಿದ ಮಕ್ಕಳ ದಂಡೇ ಕಂಡುಬರುತ್ತದೆ.

ಇನ್ನು ಮಕ್ಕಳನ್ನು ನದಿ ಕಿನಾರೆಗೆ ಒಬ್ಬೊಬ್ಬರನ್ನು ಕಳುಹಿಸುವುದಕ್ಕೆ ಪೋಷಕರಿಗೆ ಧೈರ್ಯ ಸಾಲದೆ ಅವರು ಕೂಡ ಮಕ್ಕಳ ಜತೆಗೆ ಬರಬೇಕಾದ ಸ್ಥಿತಿ ಇದೆ. ಮಕ್ಕಳು ಆನ್‌ಲೈನ್ ಕ್ಲಾಸ್ ಬಿಟ್ಟು ನದಿಯ ನೀರಿಗಿಳಿದು ಹೆಚ್ಚು-ಕಮ್ಮಿ ಆಗುವ ಸಾಧ್ಯತೆಯೂ ಇರುವುದರಿಂದ ಅವರನ್ನು ಕಾಯುವುದಕ್ಕೆ ಪೋಷಕರು ಬೇಕೇ ಬೇಕು ಎಂಬ ಸ್ಥಿತಿ ಇದೆ. ಇನ್ನು ಮಳೆಗಾಲವಾಗಿದ್ದು, ನದಿಯಲ್ಲಿ ನೀರು ಪೋಷಕರ ಆತಂಕವೂ ಹೆಚ್ಚಾಗಿದೆ.

ಮಕ್ಕಳ ಜೊತೆ ಹೆತ್ತವರು ಬರಬೇಕಾದ ಅನಿವಾರ್ಯ ಪರಿಸ್ಥಿತಿ ಮನೆಕೆಲಸ ಮಾಡಲು ಸಾಧ್ಯವಿಲ್ಲದಂತಾಗಿದೆ. ಒಟ್ಟಿನಲ್ಲಿ ಸಮಸ್ಯೆ ಪರಿಹಾರದ ದೃಷ್ಟಿಯಿಂದ ಅಧಿಕಾರಿಗಳು ಗಮನಹರಿಸಬೇಕಾಗಿದೆ.

ಈ ಭಾಗದ ಜನರಿಗೆ ಅಗತ್ಯದ ಕರೆ ಬಂದರೆ ಮನೆ ಮಹಡಿಗೆ ಓಡಿ ಹೋಗಬೇಕು ಅಥವಾ ನದಿ ಕಿನಾರೆಗೆ ಬರಬೇಕು ಇಂತಹ ಪರಿಸ್ಥಿತಿಯ ಮಧ್ಯೆ ಶಾಲಾ ಮಕ್ಕಳು ಆನ್ ಲೈನ್ ಕ್ಲಾಸಿನ ಕಿರಿಕಿರಿ ಬೇರೆ ಎಂದು ಹೇಳುತ್ತಾರೆ ಇಲ್ಲಿನ ನಿವಾಸಿಗಳು.

 

ಶಾಲಾ ಮಕ್ಕಳಿಗೆ ಆನ್ ಲೈನ್ ಕ್ಲಾಸಿನಲ್ಲಿ ಹಾಜರಿ ಕರೆಯುವಾಗಲೇ ನೆಟ್‌ವರ್ಕ್ ಆಫ್ ಆದರೆ ಅಂದಿನ ಹಾಜರಿಯೂ ಸಿಗುವುದಿಲ್ಲ. ಹೀಗಾಗಿ ನಾವು ನೆಟ್‌ವರ್ಕ್ ಇಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿರುವುದಾಗಿ ಸ್ಥಳೀಯರು ಅಭಿಪ್ರಾಯಿಸುತ್ತಾರೆ.

ಮಕ್ಕಳಿಗೆ ತರಗತಿ, ಪರೀಕ್ಷೆಗಳು ಆನ್‌ಲೈನ್ ಮೂಲವೇ ನಡೆಯುತ್ತಿರುವುದರಿಂದ ನೆಟ್‌ವರ್ಕ್ಯಿಲ್ಲದೆ ನಮಗೆ ಸಾಕಷ್ಟು ತೊಂದರೆ ಉಂಟಾಗಿದೆ. ನದಿ ಕಿನಾರೆಯಲ್ಲಿ ನೆಟ್‌ವರ್ಕ್ ಇರುವುದರಿಂದ ಮಕ್ಕಳು ಬರುವಾಗ ನಾವು ಪೋಷಕರು ಕೂಡ ಮನೆಗೆಲಸ ಬಿಟ್ಟು ಅವರ ಜತೆ ಬರಬೇಕಾದ ಸ್ಥಿತಿ ಇದೆ. ಈ ಭಾಗದ ಎಲ್ಲರೂ ನೆಟ್‌ವರ್ಕ್ಗಾಗಿ ನದಿ ಕಿನಾರೆಗೆ ಬರುವುದರಿಂದ ಬೆಳಗ್ಗೆ-ಸಂಜೆ ೩೦ರಿಂದ ೪೦ ಮಕ್ಕಳು ಸೇರುತ್ತಾರೆ.

*ಶಾಂತಲಾ ಚಂಡ್ತಿಮಾರ್

ಪೋಷಕಿ.*

ಮೊಬೈಲ್ ಕೂಡ ಒದ್ದೆ : ಮಳೆ ಬರುವಾಗ ಕೊಡೆ ಹಿಡಿದುಕೊಂಡು ತರಗತಿ ಕೇಳಬೇಕಿದ್ದು, ಮೊಬೈಲ್ ಕೂಡ ಒದ್ದೆಯಾಗುತ್ತದೆ. ಬಿಸಿಲಿನ ವೇಳೆ ಇಲ್ಲಿ ನಿಲ್ಲುವುದು ಕೂಡ ಅಸಾಧ್ಯ. ನೆಟ್‌ವರ್ಕ್ ಇಲ್ಲ ಎಂದು ಹೇಳಿದರೆ ಅದು ನಮ್ಮ ಸಮಸ್ಯೆ ಅಲ್ಲ. ಸಂಬಂಧಪಟ್ಟವರು ಇತ್ತ ಗಮನಹರಿಸಿ ನಮ್ಮ ಸಮಸ್ಯೆ ಬಗೆಹರಿಸಬೇಕು.

*ಸುಪ್ರಿಯಾ

ಎಸೆಸೆಲ್ಸಿ ವಿದ್ಯಾರ್ಥಿನಿ.

*

ಸಾಕಷ್ಟು ಕ್ಲಾಸ್ ಮಿಸ್ : ಮನೆಯಲ್ಲಿ ನೆಟ್‌ವರ್ಕ್ ಇಲ್ಲದೇ ಇದ್ದರೂ, ಆಗಾಗ ಹೋಮ್‌ವರ್ಕ್ ಕಳುಹಿಸುತ್ತಾರೆ. ಅದನ್ನು ಡೌನ್‌ಲೋಡ್ ಮಾಡುವುದಕ್ಕೆ ನದಿಯ ಬಳಿ ಬರಬೇಕು. ಬಳಿಕ ಅದನ್ನು ಹಿಂದೆ ಕಳುಹಿದುವುದಕ್ಕೂ ಅದೇ ತೊಂದರೆ ಎದುರಾಗುತ್ತದೆ. ಹೀಗಾಗಿ ಸಾಕಷ್ಟು ಕ್ಲಾಸ್‌ಗಳನ್ನು ನಾವು ಮಿಸ್ ಮಾಡಿಕೊಂಡಿದ್ದೇವೆ. ಪೋಯಮ್ ಡೌನ್‌ಲೋಡ್ ಇಟ್ಟು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ.

 *ದಿಶಾಂತ್

೪ನೇ ತರಗತಿ ವಿದ್ಯಾರ್ಥಿ.*

ನೆಟ್ ವರ್ಕ್ ಸಮಸ್ಯೆ ಕುರಿತಾಗಿ ಸಂಸದರು, ಜಿಲ್ಲಾಧಿಕಾರಿ ಹಾಗೂ ಜಿ.ಪಂ.ಸಿಇಓ ನೇತೃತ್ವದಲ್ಲಿ ಸಂಬಂಧಿಸಿದ ಸಂಸ್ಥೆಗಳ ಅಧಿಕಾರಿಗಳ ಜಿಲ್ಲಾಮಟ್ಟದ ಸಭೆ ನಡೆಸಲಾಗಿದೆ. ಕೆಲವೆಡೆ ಅಗತ್ಯವಿರುವ ಟವರ್ ನಿರ್ಮಾಣಕ್ಕೆ ಇದ್ದ ಗೊಂದಲ‌‌ ನಿವಾರಿಸಲಾಗಿದೆ. ಅನುಷ್ಠಾನ ಕ್ಕೆ ಸಂಬಂಧಿಸಿ ತಾಲೂಕಿನಲ್ಲಿ ಶೀಘ್ರವೇ ಸಭೆ ನಡೆಸಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. *-ರಾಜೇಶ್ ನಾಯ್ಕ್ ಶಾಸಕರು, ಬಂಟ್ವಾಳ ವಿಧಾನಸಭಾ ಕ್ಷೇತ್ರ*

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...