ಬಿ. ಪಿ. ಎಲ್. ಪಡಿತರ ಚೀಟಿ ವಿತರಣೆಗೆ ಸಂಬಂಸಿದಂತೆ ರಾಜ್ಯದಾದ್ಯಂತ ಬಿ. ಪಿ. ಎಲ್ ಪಡಿತರ ಚೀಟಿ ಆಪೇಕ್ಸಿಸಿ ಹಲವಾರು ಜನ ಸಂಬಂಧ ಪಟ್ಟ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ 8–10 ತಿಂಗಳು ಕಳೆದರೂ ಇನ್ನೂ ಬಿ. ಪಿ. ಎಲ್ ಪಡಿತರ ಚೀಟಿ ಲಭಿಸಿರುವುದಿಲ್ಲ. ಇದರಿಂದ ಬಿ. ಪಿ. ಎಲ್. ಪಡಿತರ ಚೀಟಿ ಮಾನದಂಡ ದಲ್ಲಿ ಸಿಗುವ ಸರಕಾರಿ ಸೌಲಭ್ಯಗಳಿಗೆ ಹಲವು ಕುಟುಂಬಗಳು ವಂಚಿತವಾಗಿವೆ. ಆರೋಗ್ಯ ಸಂಬಂಧ ಖಾಯಿಲೆ ಗಳಿಗೆ ವಿನಾಯಿತಿ ಪಡೆಯಲು ಅಯುಷ್ಮಾನ್ ಕಾರ್ಡ್ ಪಡೆಯಲು ಅರ್ಹ ಬಿ. ಪಿ. ಎಲ್ ಕುಟುಂಬಗಳಿಗೆ ತೊಂದರೆಯಾಗಿದೆ.
ಆದೂ ಅಲ್ಲದೇ ಪಡಿತರ ಚೀಟಿಯಿಂದ ಹೆಸರು ತೆಗೆಯಲು, ತಿದ್ದುಪಡಿ ಮಾಡಲು ಸಹ ಅವಕಾಶ ಇರುವುದಿಲ್ಲವಾಗಿದೆ. ಇದರಿಂದ ತುಂಬಾ ಜನರಿಗೆ ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲದಂತಾಗಿದೆ.
ಆದುದರಿಂದ ಈಗಾಗಲೇ ಬಿ. ಪಿ. ಎಲ್. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಶೀಘ್ರವಾಗಿ ಪಡಿತರ ಚೀಟಿ ವಿತರಣೆ ವಿತರಣೆ ಹಾಗೂ ಹೆಸರು ತಿದ್ದುಪಡಿ, ಸೇರ್ಪಡೆಗೆ ಅವಕಾಶ ಮಾಡಿಕೊಡುವಂತೆ ಸಂಬಂಧ ಪಟ್ಟ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವಂತೆ ಈ ಮುಲಕ ವಿನಂತಿಯನ್ನು ಪ್ರಭಾಕರ ಪ್ರಭು ಮಾಡಿದ್ದಾರೆ.