ಬಂಟ್ವಾಳ: ನೂತನ ಸಿ.ಎಂ. ಬೊಮ್ಮಾಯಿ ಅವರಿಂದ ಎರಡು ಹೊಸ ಯೋಜನೆಗಳು. ರೈತರ ಪರ ಬ್ಯಾಟಿಂಗ್ ಆರಂಭಿಸಿದ ಸಿ.ಎಂ. ಅಧಿಕಾರ ಸ್ವೀಕರಿಸಿದ ಕೆಲವೇ ಹೊತ್ತಿನಲ್ಲಿ ಹಲವು ಯೋಜನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಬೊಮ್ಮಾಯಿ, ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಈ ಹಿನ್ನೆಲೆಯಲ್ಲಿ ರೈತ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಹೊಸ ಶಿಷ್ಯ ವೇತನ ಘೋಷಣೆ ಮಾಡಲಾಗಿದೆ ಎಂದರು.
ರೈತರ ಮಕ್ಕಳ ಶಿಕ್ಷಣಕ್ಕಾಗಿ ಶಿಷ್ಯ ವೇತನ ಜಾರಿ
ಸಂಧ್ಯಾ ಸುರಕ್ಷಾ ಯೋಜನೆ ಹಣ 1000 ರೂಪಾಯಿಯಿಂದ 1200 ರೂಪಾಯಿಗೆ ಹೆಚ್ಚಳ ವಿದವಾವೇತನ 600ರಿಂದ 800 ರೂಗೆ ಹೆಚ್ಚಳ ಶೇ.60-75ರಷ್ಟು ಅಂಗವಿಕಲವಿರುವವರಿಗೆ ಅಂಗವಿಕಲರ ವೇತನ ಯೋಜನೆಯಡಿ 600-800ರೂ ಗೆ ಹೆಚ್ಚಳ ಸೇರಿದಂತೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದರು.