ಬಂಟ್ವಾಳ: ಅಸೌಖ್ಯದಿಂದಿರುವ ಬಿಜೆಪಿ ಪ್ರಮುಖರುಗಳಾದ ಮಂಚಿ ಗ್ರಾಮದ ರಮೇಶ್ ರಾವ್ ಮಂಚಿ ಮತ್ತು ವೀರಕಂಭದ ಗ್ರಾಮದ ಕೇಶವ ನಾಯ್ಕ ಇವರ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ.ಪದ್ಮನಾಭ ಕೊಟ್ಟಾರಿಯವರು,ಬಿಜೆಪಿ ಕ್ಷೇತ್ರ ಕಾರ್ಯದರ್ಶಿ ಗಣೇಶ್ ರೈ ಮಾಣಿ,ವೀರಕಂಭ ಗ್ರಾ.ಪಂ ಅಧ್ಯಕ್ಷರಾದ ದಿನೇಶ್ ಪೂಜಾರಿ,ಜಯಂತಿ ವೀರಕಂಭ ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.